ಬಂದು ನಿಲ್ಲೋ ರಮಾಪತೆ ಬಂದು ನಿಲ್ಲೋ ll
ಬಂದು ನಿಲ್ಲೊ ನಿನಗೊಂದಿಸುವೆ ಗೋ l
ವಿಂದ ಗೋವಳ ರಾಯ ಸಂದೇಹ ಮಾಡದೆ ll ಪ ll
ಸದೋಷಿಗ ನಾನು ಸದಾ ನಿರ್ಮಲ ನೀನು ll
ಪಾದೋಪಾದಿಗೆ ಬೇಡಿಸುವುದುಚಿತವಲ್ಲ ll 1 ll
ಮನದೊಳು ಪೊಳದು ಚಿಂತನೆ ನೆಲೆಯಾಗಿ ll
ಘನಮಹಿಮನೆ ಮಧ್ವಮುನಿ ಮನಮಂದಿರ ll 2 ll
ಕಡಗೋಲ ನೇಣು ಪಿಡಿದ ಪರಮಾನಂತ ll
ಉಡುಪಿನ ಶ್ರೀಕೃಷ್ಣ ವಿಜಯವಿಟ್ಠಲರೇಯಾ ll 3 ll
***