Thursday, 11 March 2021

ಬಂದು ನಿಲ್ಲೋ ರಮಾಪತೆ ankita vijaya vittala

 ಬಂದು ನಿಲ್ಲೋ ರಮಾಪತೆ ಬಂದು ನಿಲ್ಲೋ ll

ಬಂದು ನಿಲ್ಲೊ ನಿನಗೊಂದಿಸುವೆ ಗೋ l

ವಿಂದ ಗೋವಳ ರಾಯ ಸಂದೇಹ ಮಾಡದೆ ll ಪ ll


ಸದೋಷಿಗ ನಾನು ಸದಾ ನಿರ್ಮಲ ನೀನು ll

ಪಾದೋಪಾದಿಗೆ ಬೇಡಿಸುವುದುಚಿತವಲ್ಲ ll 1 ll


ಮನದೊಳು ಪೊಳದು ಚಿಂತನೆ ನೆಲೆಯಾಗಿ ll

ಘನಮಹಿಮನೆ ಮಧ್ವಮುನಿ ಮನಮಂದಿರ ll 2 ll


ಕಡಗೋಲ ನೇಣು ಪಿಡಿದ ಪರಮಾನಂತ ll

ಉಡುಪಿನ ಶ್ರೀಕೃಷ್ಣ ವಿಜಯವಿಟ್ಠಲರೇಯಾ ll 3 ll

***

No comments:

Post a Comment