Thursday, 11 March 2021

ವಿಟ್ಠಲಯ್ಯ ವಿಟ್ಠಲಯ್ಯ ಧಿಟನಿಹೆ ನಿ ankita gurugovinda vittala

 ವಿಠಲಯ್ಯ ವಿಠಲಯ್ಯ


ವಿಟ್ಠಲಯ್ಯ ವಿಟ್ಠಲಯ್ಯ ll ಪ ll


ಧಿಟನಿಹೆ ನಿ l ಷ್ಕುಟಿಲ ಗುರು ಗೋವಿಂದ ll ಅ ಪ ll 


ಜಿಗಿದು ಜಲದಿ ನಗ ಮಂದರ ನೆಗಹುತ

ವಿಗಡಾಸುರ ಹಯಮೊಗನನ ಕಡಿದೆ  ll 1 ll


ಪಟುತರ ನರಮೃಗ l ವಟು ವೇಷದಿ ನಿನ್

ಎಟಪದದಂಗುಟ ಸುರ l ತಟನಿಗೆ ಕಾರಣ ll 2 ll


ನೃಪಕುಲ ಛೇದನ l ವಿಪಿನದಿ ಶಬರಿಯ

ಸುಫಲವ ಮೆ l ದ್ದಪವರ್ಗವನಿತ್ತೆ ll 3 ll


ಕ್ರೂರರ ತರಿದು l ವರ ಸತಿಯರ ವ್ರತ

ನೆರೆ ಅಳಿಸುತ ತಾ l ತುರಗವನೇರ್ದಾ ll 4 ll


ಭಾವದಿ ಮೈಮರೆ l ದಾವನು ತವಪದ 

ಸೇವಿಸೆ ಸಲಹುವಿ l ಗುರುಗೋವಿಂದ ll 5 ll

***


No comments:

Post a Comment