Showing posts with label ಹೇಗೆ ಹೇಗೆ ಹೇಗೆ ಒಳಗೆ ಹೋಗಲೆನಿತು ಗದ್ದಲ ankita channakeshava ಮುಂಡಿಗೆ mundige. Show all posts
Showing posts with label ಹೇಗೆ ಹೇಗೆ ಹೇಗೆ ಒಳಗೆ ಹೋಗಲೆನಿತು ಗದ್ದಲ ankita channakeshava ಮುಂಡಿಗೆ mundige. Show all posts

Friday, 4 June 2021

ಹೇಗೆ ಹೇಗೆ ಹೇಗೆ ಒಳಗೆ ಹೋಗಲೆನಿತು ಗದ್ದಲ ankita channakeshava ಮುಂಡಿಗೆ mundige

 .

ಹೇಗೆ ಹೇಗೆ ಹೇಗೆ ಒಳಗೆ ಹೋಗಲೆನಿತು ಗದ್ದಲ

ಸಾಗುತಿರಲು ದೂರ ದೂರ ತಾಗಲೆನಿತು ಹತ್ತಿರ || ಪ ||


ಒಂದು ಎರಡು ಮೂರು ನಾಲ್ಕು ಅರಿವ ಮನವೆ ಬಾರದೆ

ಐದು ಆರು ಏಳು ಎಂಟು ತಂಟೆ ವಶವ ಮಾಡಿದೆ


ನೆಂಟನಂತೆ ಕೊಡವಿ ನಡೆವ ಬಂಟನಲ್ಲ ಸುಳ್ಳದು

ಅಂಟುಗಂಟನೊಂದು ಗಣಿಸೆ ತುಂಟಾಟವು ಸಲ್ಲದು


ಎನಿತು ಬಾಡಿಗೆಯ ಸಲಿಕೆ ದಣಿವು ನೋವು ಬಳಲಿಕೆ

ಸ್ವಂತ ಸೂರು ಕಾಯುತಿರಲು ಮರುಳುತನವು ಗಾಣಕೆ


ವೃತ್ತದೊಳಗು ಚೆಂದವೇನು ದ್ವಾರವಿರದ ತತ್ತಿಯು

ಉದಯವಾಗಲಾವ ತಡೆಯು ಏರಿ ನಿಲುವೆ ಸುತ್ತಿಯು


ಏತ್ತಲಿಲ್ಲ ಬಿತ್ತಲಿಲ್ಲ ಹತ್ತಲಿಲ್ಲ ಏಣಿಯು

ಸುತ್ತಿ ಇಳಿವ ನೆನಕೆ ಸಾಕು ಹತ್ತಿಕೊಳದೆ ಭೀತಿಯು


ಇನ್ನು ಬಿಡದೆ ಕ್ರಮಿಸುತಿರುತ ಮುನ್ನುಡಿಯು ವಿರಾಮಕೆ

ಚೆನ್ನಕೇಶವನ್ನ ಕೂಗು ಒಯ್ಯೊ ಪ್ರಭುವೆ ಸನಿಹಕೆ

***