ರಾಗ - : ತಾಳ -
ಕೊಳಲನೂದುವಪರಿಯಾ ನೋಡಲೆಕಾಂತೇ
ಚೆಲುವಾ ಶ್ರೀಕೃಷ್ಣಯ್ಯನನ್ನೂ ll ಪ ll
ಗೆಜ್ಜೆಕಾಲಂದಿಗೆ ಘಲುಘಲುರೆನ್ನುತಾ
ಮೂರ್ಜಗಂಗಳನೆಲ್ಲಾ ಸೋಜಿಗಗೊಳಿಸುವಾ ll ಅ ll
ಕಂಗಳ ಕುಡಿನೋಟವು l ರಂಗಯ್ಯನ
ಮುಂಗುರುಳಿನ ಸೊಬಗೂ
ಹೊನ್ನಿನುಂಗುರವಿಟ್ಟ ಬೆರಳಿಂದ ಊದುವ l ಚೆಲುವ
ಚನ್ನಿಗ ನಮ್ಮ ಅಕ್ರೂರವರದನು ll 2 ll
ಹೊಳೆವಪೀತಾಂಬರವೂ l ಕೌಸ್ತುಭಹಾರ ಎಡಬಲದಲ್ಲಿ
ಪೊಳೆವಾ ನಡುವಿನೊಡ್ಯಾಣವೂ l
ಥಳಥಳಿಸುತ್ತಿರುವಾ ಸುಳಿಪಲ್ಲಿನಿಂದ
ಪೊಳೆವಾ ಮುರಳೀಧರನ ನೋಡೇ ll 2 ll
ಬೃಂದಾವನದಿ ಕೊಳಲಾನೂದುವಾ ನಮ್ಮ
ಸುಂದರಮೂರುತಿಯಾ ಮಂಗಳಮಹಿಮನಾದ
ಇಂದಿರೇಶವಿಟ್ಠಲನ್ನ ಕಂಗಾ
ಳಿಂದನೋಡಿ ಆನಂದ ಪಡಿಸುವಂಥ ll 3 ll
***