..
kruti by ವೀರನಾರಾಯಣ Veeranarayana
ಎಂಥ ವಿಲಕ್ಷಣನೋ ಶ್ರೀಹರಿ ಪ
ಪಂಥವು ತಿಳಿಯದನಂತ ಮೂರುತಿಯೆ ಅ.ಪ.
ಅಣುವೆಂದರೆ ನೀ ಮಹತನಾಗುವಿಅಣುವಾಗುವಿ ನೀ ಮಹತನೆಂದರೆಅಣು ಮಹತ್ತೆರಡೂ ಕೂಡಿರ ಲಾ ಸಹಗುಣವು ತಿಳಿಯದೊ ಅಜ್ಞೇಯಾ 1
ಧನವ ಕೊಟ್ಟರೆ ನೀ ಬೇಡೆನ್ನುವಿತಿನಿಸು ಕೊಟ್ಟರೆ ಒಲಿಯದಲಿರುವಿಅನುದಿನ ಮನವನ್ನಿತ್ತು ಮಾಳ್ಪ ಬರಿಘನ ಭಕ್ತಿಗೆ ಬಹು ನೀನು ಮೆಚ್ಚುವಿ 2
ಆಕಾರವು ನಿನಗಿಲ್ಲವೆಂತೆನೆಸಾಕಾರ ನೀನಾಗಿ ತೋರುವಿಈ ಕಾರಣ ನಿಜ ನಿಜ ತಿಳಿಯದು ಪೇಳಲುಬೇಕೈ ಗದುಗಿನ ವೀರನಾರಾಯಣ3
***