Wednesday, 1 September 2021

ಎಂಥ ವಿಲಕ್ಷಣನೋ ಶ್ರೀಹರಿ ankita gadugina veeranarayana

 ..

kruti by ವೀರನಾರಾಯಣ Veeranarayana 


ಎಂಥ ವಿಲಕ್ಷಣನೋ ಶ್ರೀಹರಿ ಪ


ಪಂಥವು ತಿಳಿಯದನಂತ ಮೂರುತಿಯೆ ಅ.ಪ.


ಅಣುವೆಂದರೆ ನೀ ಮಹತನಾಗುವಿಅಣುವಾಗುವಿ ನೀ ಮಹತನೆಂದರೆಅಣು ಮಹತ್ತೆರಡೂ ಕೂಡಿರ ಲಾ ಸಹಗುಣವು ತಿಳಿಯದೊ ಅಜ್ಞೇಯಾ 1


ಧನವ ಕೊಟ್ಟರೆ ನೀ ಬೇಡೆನ್ನುವಿತಿನಿಸು ಕೊಟ್ಟರೆ ಒಲಿಯದಲಿರುವಿಅನುದಿನ ಮನವನ್ನಿತ್ತು ಮಾಳ್ಪ ಬರಿಘನ ಭಕ್ತಿಗೆ ಬಹು ನೀನು ಮೆಚ್ಚುವಿ 2


ಆಕಾರವು ನಿನಗಿಲ್ಲವೆಂತೆನೆಸಾಕಾರ ನೀನಾಗಿ ತೋರುವಿಈ ಕಾರಣ ನಿಜ ನಿಜ ತಿಳಿಯದು ಪೇಳಲುಬೇಕೈ ಗದುಗಿನ ವೀರನಾರಾಯಣ3

***


No comments:

Post a Comment