Showing posts with label ಬಂದೆ ಗುರುರಾಯ ನಿನ್ನ ಸಂದರುಶನವ ಬಯಸಿ bheemesha vittala. Show all posts
Showing posts with label ಬಂದೆ ಗುರುರಾಯ ನಿನ್ನ ಸಂದರುಶನವ ಬಯಸಿ bheemesha vittala. Show all posts

Monday, 6 September 2021

ಬಂದೆ ಗುರುರಾಯ ನಿನ್ನ ಸಂದರುಶನವ ಬಯಸಿ ankita bheemesha vittala

 ankita ಭೀಮೇಶವಿಠಲ

ರಾಗ: ಬೇಗಡೆ ತಾಳ: ಏಕ


ಬಂದೆ ಗುರುರಾಯ ನಿನ್ನ ಸಂದರುಶನವ ಬಯಸಿ


ಬಂದೆನೊ ಭವದೊಳುನೊಂದು ನಿನ್ನ ಪಾದಾರ-

ವಿಂದವ ನೋಡ್ಯಾನಂದ ಪಡೆಯಲು ದಿನದಿನ ಅ.ಪ.


ಪರಿಪರಿಯಿಂದಲಿ ಪರಮನುಜರನನು-

ಸರಿಸಿದ ದೋಷ ಹರಿಪದೆಂದು ಬೇಡಿ ನಮಿಸುತಲಿ 1

ಸತತ ಸತಿಸುತರತತಿಗೆ ಮೋಹಿಸದೆ ಕೃತಿ-

ಪತಿಯ ಸ್ಮರಿಪ ಮತಿಯಬೇಡಿ ನಮಿಸುತಲಿ 2

ಕಠಿಣದಿ ಭೀಮೇಶವಿಠಲನೆ ನಿಮ್ಮ ನುಡಿ

ತೃಟಿಮೀರದೆ ತಾ ಥಟನೆ ಮಾಡುವದರಿತು 3

***