ಇಂದು ನೋಡಿದೆ ನಂದತೀರ್ಥ ಮುನೀಂದ್ರ ವಂದಿತ ಚರಣನ ||ಪ||
ವಂದಿಸುವ ಭಕ್ತರಿಗೆ ನಿತ್ಯಾನಂದ ಫಲದ ಮುಕುಂದನ ||ಅಪ||
ತಮನ ವೈರಿಯ ಮಂದರಾದ್ರಿಯ ಕಮಠ ರೂಪದಿ ಪೊತ್ತನಾ |
ಕಮಲ ಸಂಭವ ಭವ ಹಿರಣ್ಯಕ ದಮನ ವಾಮನ ಮೂರ್ತಿಯಾ ||೧||
ಭೂಮಿ ಪರ ಸಂಹರಿಸಿ ದಶರಥ ರಾಮನಾಮದಿ ಮೆರೆದನಾ |
ಸೋಮ ಪಾದಿಪ ಸುತನಿಗೊಲಿದು ಸಂಗ್ರಾಮದೊಳು ರಕ್ಷಿಸಿದನಾ ||೨||
ಬುದ್ಧ ರೂಪದಿ ತ್ರಿಪುರ ಸತಿಯರ ಬುದ್ಧಿ ಭೇದನ ಮಾಡ್ದನಾ |
ಯುದ್ಧದಲಿ ಕಲಿಮುಖ್ಯ ದೈತ್ಯರ ಗೆದ್ದ ಗಾನ ವಿಲೋಲನಾ ||೩||
ದೇವಕಿ ವಸುದೇವ ತನಯನ ದೇವಗಣ ಸಂಸೇವ್ಯನಾ |
ಈ ವಸುಂಧರೆಯೊಳಗೆ ಮಧ್ವ ಸರೋವರ ನಿವಾಸನಾ ||೪||
ಪೋತವೇಶನ ವೀತ ಶೋಕನ | ಪೂತನಾದಿ ವಿಘಾತನಾ
ಮಾತರಿಶ್ವಪ್ರಿಯ ಗುರು ಜಗನ್ನಾಥ ವಿಠಲ ರಾಯನಾ ||೫||
***
iMdu nODide naMdatIrtha munIMdra vaMdita caraNana ||pa||
vaMdisuva Baktarige nityAnaMda Palada mukuMdana ||apa||
tamana vairiya maMdarAdriya kamaTha rUpadi pottanA |
kamala saMBava bhava hiraNyaka damana vAmana mUrtiyA ||1||
BUmi para saMharisi daSaratha rAmanAmadi meredanA |
sOma pAdipa sutanigolidu saMgrAmadoLu rakShisidanA ||2||
buddha rUpadi tripura satiyara buddhi BEdana mADdanA |
yuddhadali kalimuKya daityara gedda gAna vilOlanA ||3||
dEvaki vasudEva tanayana dEvagaNa saMsEvyanA |
I vasuMdhareyoLage madhva sarOvara nivAsanA ||4||
pOtavESana vIta SOkana | pUtanAdi viGAtanA
mAtariSvapriya guru jagannAtha viThala rAyanA ||5||
***
ಇಂದು ನೋಡಿದೆ ನಂದತೀರ್ಥ ಮು - ನೀಂದ್ರವಂದಿತ ಚರಣನಾ ಪ
ವಂದಿಸುವ ಭಕುತರಿಗೆ ನಿತ್ಯಾ - ನಂದಫಲದ ಮುಕುಂದನಾಅ.ಪ
ತಮನವೈರಿಯ ಮಂದರಧರ ಕಮಠರೂಪವ ಪೊತ್ತನಾ ಕಮಲಸಂಭವಭವನಕಶಿಪು ದಮನ, ವಾಮನಮೂರ್ತಿಯಾ 1
ಭೂಮಿಪರ ಸಂಹಾರಿ, ದಶರಥ ರಾಮನಾಮದಿ ಮೆರೆದನಾ ಸೋಮಪಾಧಿಪಸುತಗೆ ಒಲಿದು ಸಂ - ಗ್ರಾಮದಲಿ ರಕ್ಷಿಸಿದನಾ 2
ಬುದ್ಧರೂಪದಿ ತ್ರಿಪುರಸತಿಯರ ಬುಧ್ಧಿ ಭೇದವ ಮಾಳ್ದನಾ ಬುದ್ಧರಲಿ ಕಲಿಮುಖ್ಯಯವನರ ಗೆದ್ದ ಗಾನವಿಲೋಲನಾ 3
ದೇವಕೀವಸುದೇವತನಯನ ದೇವಗಣ ಸಂಸೇವ್ಯನಾ ಈ ವಸುಂಧರೆಯೊಳಗೆ ಮಧ್ವಸ - ರೋವರದಲಾವಾಸನಾ 4
ಪೋತವೇಷನ ವೀತಶೋಕನ ಪೂತನಾದಿವಿಘಾತನಾ ಮಾತರಿಶ್ವಪ್ರಿಯಾ ಗುರುಜಗ ನ್ನಾಥವಿಠಲರಾಯನಾ 5
***