..
on ರಾಮಾನುಜರು
ಬೇಡಿಕೊಂಬುವೆನು ನಿಮ್ಮ ರಾಮಾನುಜರೆ
ಬೇಡಿಕೊಂಬುವೆನು ನಿಮ್ಮಾ ಪ
ಬೇಡಿಕೊಂಬುವೆ ನಿಮ್ಮ ಚರಿತೆಯ
ಪಾಡಿ ಹಿಗ್ಗುವ ಸುಖವ ಸಂತತ
ಕೂಡಿ ಹೃದಯದ ಕಮಲ ಮಧ್ಯದೊ
ಳಾಡುತೆನ್ನನು ರಕ್ಷಿಸೆನುತಲಿ ಅ.ಪ
ಚರಮ ಶ್ಲೋಕವ ಬೋಧಿಸಿ ಅಷ್ಟಾಕ್ಷರಿಯೊ
ಳಿರುವ ಗೋಪ್ಯವ ತೋರಿಸಿ
ಮೆರೆವದ್ವಯವರ ಪಂಚಸಂಸ್ಕಾರವನು
ಗೈವುತ ಪ್ರಣವ ಶಬ್ದದಿ
ಬೆರಸಿ ನಿನ್ನನೆ ಭಜಿಸಿ ಸ್ಮರಿಸುತ
ಪರಮನಾಗುವ ಮತಿಯ ತ್ವರಿತದಿ 1
ಅಷ್ಟಮದಗಳು ಎನ್ನನೂ ಬಂಧಿಸಿ ಮಾಯಾ
ಅಷ್ಟಪಾಶದಿ ನೊಂದೆನೊ
ದುಷ್ಟಕಾಮಾದಿಗಳ ಭ್ರಾಂತಿಯು
ಕಟ್ಟ ನರಕದಿ ಕೆಡಹಿ ಸುಡುತಿದೆ
ಭ್ರಷ್ಟಗುಣಗಳ ದೂರಸೇರಿಸಿ
ಶ್ರೇಷ್ಠಮುಕ್ತಿಯ ಪಡೆವ ವಿರತಿಯ 2
ಜ್ಯೋತಿ ಜ್ಯೋತಿಯ ನಿಲ್ಲಿಸಿ ಹೂಬಳ್ಳಿಯೊಳ್
ಜ್ಯೋತಿನೋಡು ಪೂಜಿಸಿ
ಮಾತೆ ಮಾತುಳ ಪಾಲಕಾನುಜ-
ತಾತ ಸತಿ ಸುತ ಬಂಧು ಮಿತ್ರ
ವ್ರಾತ ಸಂಗಡಬಂಧಬಿಟ್ಟು ಪು
ನೀತನಾಗಲಿಬೇಕು ಎನುತಲಿ 3
ಯಾದವಾದ್ರಿಯ ವಾಸನೆ ಭಕ್ತರನೆಲ್ಲ-
ಮೋದದಿಂದಲಿಯಾಳ್ವನೇ
ಮೇದಿನೀಮಹದೇವಪುರವರ
ನಾದಶ್ರೀಗುರುರಂಗ ನಿನ್ನ ಸು-
ಪಾದನಂಬಿದ ರಂಗದಾಸನ
ಪರಮಯೋಗಿಯು ಎನ್ನಿಸೆನುತಲಿ 4
ಅಷ್ಟಾಕ್ಷರದ್ವಯದರ್ಥದಿ ನಿಷ್ಠಾಪರನಾಗಿ ಮನದಿ ನಿರುತಂ ಜಪಿಸಲ್ ಇಷ್ಟಾರ್ಥವು ಸಿದ್ಧಿಸುತಂ
ಅಷ್ಟಮನೋಳ್ಬೆರದುನಿಲ್ವನಿದು ಸಿದ್ಧಾಂತಂ ಕಂದ
***
****