Showing posts with label ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ vijaya vittala. Show all posts
Showing posts with label ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ vijaya vittala. Show all posts

Thursday, 17 October 2019

ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ankita vijaya vittala

ವಿಜಯದಾಸ
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ
ಪಂಕಜಾಲಯ ಸುಪ್ರೀಯ ಪ

ಅಹಿ ಕಂಕಣನುತ ಪದ-
ಪಂಕಜ ತೋರೊ ಮೀನಾಂಕನ ಜನಕ ಅ.ಪ.

ಪತಿತ ಪಾವನ ಮೋಹನ, ಪಾಲಿಸೊ ಎನ್ನ
ಸತತ ಬಿಡದೆ ನೋಡೆನ್ನ
ಹಿತರಹಿತರಾದವರನ್ನ ಪೊರೆದಳಿದೆ ಘನ್ನ
ನತಜನರಿಗೆ ಪ್ರಸನ್ನ
ದಿತಿಸುತ ತತಿಸಂಗತಿಯಲಿ
ಮಥಿಸಲು ವನಧಿಯ ಅತಿ ಸಮ್ಮತಿಯಲಿ
ಚತುರ ಧರಿಸಿ ಪರ್ವತ ಸುರತತಿಗ-
ಮೃತ ವುಣಿಸಿದ ಶಾಶ್ವತಗತಿನಾಥ 1

ಸತಿಯ ಕಾಯಿದ ವಿನೋದ ಸಾಮಜವರದ
ಚತುರದಶ ಲೋಕಾಧಿನಾಥ
ಗತಿ ನೀನೆ ಮಹಾಪ್ರಸಾದ ಪರಮಮೋದ
ಅತಿಶಯದಿ ಪೊಳೆವ ಪಾದ
ಶತಪತ್ರವು ಹೃದ್ಗತವಾಗಲಿ ಉ-
ನ್ನತ ಮಹಿಮನೆ ಕೀರುತಿವಂತನೆ ಅ-
ಪ್ರತಿಭಾರತಮಲ್ಲ ಮೂರವತಾರಗೆ
ಅತಿಪ್ರಿಯನೆನಿಪ ಮೂರತಿ ಚತುರದೇವ 2

ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ
ಚ್ಯುತಿ ದೂರ ಶೌರೀ ಕಾಳಿಂಗ-
ದುರಿತ ಮಾತಂಗ-ಮರಿಗೆ ಸಿಂಗ
ತುತಿಪೆ ಕರುಣಾಂತರಂಗ
ಕ್ಷಿತಿಯೊಳಗಹಿ ಪರ್ವತನಿವಾಸನೆ
ಖರೆಗೊಳಿಸುವ ದುರ್ಮತಿಯನು ತೊಲಗಿಸಿ
ತ್ವತು ಪಾದದಲಿಡು ಮತಿಯಲ್ಲದೆ ತಿರು -
ಪತಿ ವಿಜಯವಿಠ್ಠಲ ಇತರವನರಿಯೆ 3
**********