ನಾರಾಯಣ ನರಹರಿ ನಾರದಪ್ರಿಯ ನರಸುರಮುನಿ ವರದಾಯಕ pa
ವೇದ ಕದ್ದೊಯ್ದವನ ಮರ್ದಿಸಲಿಕ್ಕೆ ಸಾಧಿಸಿ ಬಂದ್ಯೊ ಮಚ್ಛರೂಪನೆ ಮಾಧವ ನೀ ಬಂದು ಕೂರ್ಮನಾಗಿ ನಿಂದು ಮೇದಿನಿಯ ಭಾರವ ತಾಳಿದೆ 1
ಧರೆಯ ಕದ್ದಸುರನ ಕೋರದಾಡಿಂದ ಸೀಳಿ ವರಾಹರೂಪಬಂದು ದೋರಿದೆ ಹಿರಣ್ಯಕಶ್ಯಪ ವಿದಾರಣ ಮಾಡಿ ನೀ ತರಳ ಪ್ರಲ್ಹಾದನ ರಕ್ಷಿಸಿದೆ 2
ವಾಮನ ರೂಪವದೋರಿದೆ ನೇಮದಿಂದಲಿ ಪಿತನಾಜ್ಞೆಯ ನಡೆಸಲು ಸ್ವಾಮಿ ಭಾರ್ಗವರೂಪ ತಾಳಿದೆ 3
ದೇವತೆಗಳ ಸ್ಥಾಪಿಸಲಿಕ್ಕೆ ಬಂದು ದೈತ್ಯ ರಾವಣನ ಕೊಂದ್ಯೊ ಶ್ರೀರಾಮ ನೀ ದೇವಕಿ ಉದರದಲಿ ಜನಿಸಿ ಬಂದು ಕೃಷ್ಣ ಗೋವಳರನ್ನು ಪ್ರತಿಪಾಲಿಸಿದೆ 4
ಪತಿವ್ರತೆಗಳ ವ್ರತ ಅಳಿಯಲಿಕ್ಕಾಗಿ ಬಂದು ಸುಳಹುದೋರಿದೂ ಬೌದ್ದ್ಯರೂಪನೆ ಹತ್ತಿ ಕುದರಿಯ ಒತ್ತಿ ಆಳಲಿಕ್ಕೆ ಮತ್ತೆ ಬಂದೆಯ ಕಲ್ಕಿರೂಪನೆ 5
ಹತ್ತವತಾರ ಧರಿಸಿ ಬಂದು ಕ್ಷಿತಿಯೊಳ ಪತಿತರ ಪಾವನಗೈಸಿದೆ ಭಕ್ತಜನರುದ್ದರಿಸಲಿಕ್ಕೆ ಬಂದು ಶಕ್ತಿಪರಾಕ್ರಮದೋರಿದೆ 6
ಸಾವಿರ ನಾಮದೊಡೆಯ ಸ್ವಾಮಿ ನೀ ಬಂದು ಭಾವಿಸುವರೊಡನೆ ಕೂಡಿದೆ ಭವಭಂಧನ ತಾರಿಸಿ ಮಹಿಪತಿಯ ಪ್ರಾಣ ಪಾವನ ನೀ ಮಾಡಿದೆ 7
***