Showing posts with label ಅಂದಿಂದ ನಾ ನಿನ್ನನೆರೆನಂಬಿದೆನೊ purandara vittala. Show all posts
Showing posts with label ಅಂದಿಂದ ನಾ ನಿನ್ನನೆರೆನಂಬಿದೆನೊ purandara vittala. Show all posts

Tuesday 3 December 2019

ಅಂದಿಂದ ನಾ ನಿನ್ನನೆರೆನಂಬಿದೆನೊ purandara vittala

ರಾಗ ಕಲ್ಯಾಣಿ ತ್ರಿಪುಟ ತಾಳ

ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ||ಪ||
ತಂದೆ ಗೋವಿಂದ ಮುಕುಂದ ನಂದನ ಕಂದ ||ಅ||

ಬಲವಂತನುತ್ತಾನಪಾದರಾಯನ ಕಂದ
ಮಲತಾಯಿ ನೂಕಲು ಅಡವಿಯೊಳು
ಜಲಜಾಕ್ಷ ನಿನ್ನ ಕುರಿತ ತಪವಿರಲಾಗಿ
ಒಲಿದು ಧ್ರುವಗೆ ಪಟ್ಟ ಗಟ್ಟಿದ್ದು ಕೇಳಿ

ನಕ್ರಂಗೆ ಗಜರಾಜ ಸಿಕ್ಕಿ ಸರಸಿಯೊಳು
ದುಃಖದಿ ಶ್ರೀಹರಿ ಸಲಹೆನ್ನಲು
ಚಕ್ರದಿ ನೆಗಳ ಕಂಠವ ತರಿದು ಭಕ್ತನ
ವಕ್ರವ ಪರಿದಾದಿಮೂಲನೆಂಬುದ ಕೇಳಿ

ದ್ರುಪದನ ಸುತೆಯ ದುಶ್ಯಾಸನ ಸಭೆಯೊಳು
ಕಪಟದಿ ಸೀರೆಯ ಸೆಳೆಯುತಿರೆ
ಸುಪರ್ಣ ವಾಹನ ಕೃಷ್ಣ ಸಲಹೆಂದರಬಲೆಯ
ಅಪಮಾನದಿಂ ಕಾಯ್ದ ಶ್ರೀಹರಿಯೆಂಬುದ ಕೇಳಿ

ಹರಿ ನಾರಾಯಣಯೆಂದು ಪ್ರಹ್ಲಾದ ಒರೆಯಲು
ದುರುಳ ದಾನವನವನೊಳು ಮುನಿದು
ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ-
ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ

ಅಂಬರೀಷಗೆ ದುರ್ವಾಸ ಶಾಪವ ಕೊಡೆ
ಅಂಬುಜಲೋಚನ ಚಕ್ರದಿಂದ
ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದ
ಕಂಬು ಚಕ್ರಧರ ಹರಿಯೆಂಬುದ ಕೇಳಿ

ಛಲ ಬೇಡ ರಾಮನ ಲಲನೆಯ ಬಿಡುಯೆಂದು
ತಲೆಹತ್ತರವಗೆ ಪೇಳಲು ತಮ್ಮನ
ಬಳಲಿಸಿ ಹೊರಡಿಸಲವ ನಿನ್ನ ಮೊರೆ ಹೋಗೆ
ಸಲೆ ವಿಭೀಷಣಗೆ ಲಂಕೆಯನಿತ್ತುದ ಕೇಳಿ

ಸುರ ನರ ನಾಗಲೋಕದ ಭಕ್ತ ಜನರನ್ನು
ಪೊರೆಯಲೋಸುಗ ವೈಕುಂಠದಿಂದ
ಸಿರಿ ಸಹಿತಲೆ ಬಂದು ಶೇಷಾಚಲದಿ ನಿಂದ
ಪುರಂದರವಿಠಲ ನಿನ್ನಯ ಚರಣವ ಕಂಡು#
***


pallavi

andinda nA ninna nere nambideno krSNa

anupallavi

tande gOvinda mukunda nandana kanda

caraNam 1

balavantan-uttAnapAdarAyana kanda malatAyi nUkalu aDaviyoLu
jalajAkSa ninna kuridu tapaviralAgi olidu dhruvage paTTa gaTTiddu kELi

caraNam 2

nakrange gajarAja sikki sarasiyoLu dukkhadi shrIhari salahennalu
cakradi negaLa kaNThava taridu bhaktana vakrava paridAdi mUlanembuda kELi

caraNam 3

drupadane suteya dushyAsana sabheyoLu kapaTadi sIreya seLeyutire
suparNa vAhana krSNa salahendarabaleya apamAnadim kAida shrIhariyembuda kELi

caraNam 4

hari nArAyaNayendu prahlAda oreyalu duruLa dAnavanavanoLu munidu
kare ninna oDeyana endu garjise narahari bandu oDaneya kAidanembuda kELi

caraNam 5

ambarISage durvAsa shApava koDe ambujalOcana cakradinda
bembatti muniya shApava pariharisida kambu cakradhara hariyembuda kELi

caraNam 6

chala bEDa rAmana llaneya biDuyendu tale hattavage pELalu tammana
baLalisi horaDisalava ninna mare hogesale vibhISaNage lankeyanittuda kELi

caraNam 7

sura nara nAgalOkada bhakta janarannu poreyalOsukha vaikuNThadinda
siri sahitale bandu shESAcaladi ninda purandara viTTala ninnaya caraNava kaNDu
***

ಅಂದಿಂದ ನಾ ನಿನ್ನನೆರೆನಂಬಿದೆನೊ ಕೃಷ್ಣತಂದೆ ಗೋವಿಂದ ಮುಕುಂದ ನಂದನ ಕಂದ ಪ

ಬಲವಂತ ಉತ್ತಾನಪಾದರಾಯನ ಕಂದಮಲತಾಯಿ ನೂಕಲು ಅಡವಿಯೊಳು ||ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿಒಲಿದು ಧ್ರುವಗೆ ಪಟ್ಟಕಟ್ಟಿದ್ದಕೇಳಿ1

ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳುದುಕ್ಖದಿ ಶ್ರೀಹರಿ ಸಲಹೆನ್ನಲು ||ಚಕ್ರದಿ ನೆಗಳ ಕಂಠವ ತರಿದು ಭಕ್ತನಅಕ್ಕಸಪರಿದಾದಿಮೂಲನೆಂಬುದಕೇಳಿ2

ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳುಕಪಟದಿ ಸೀರೆಯ ಸೆಳೆಯುತಿರೆ ||ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನುಅಪಮಾನದಿಂದ ಕಾಯ್ದ ಹರಿಯೆಂಬುದನುಕೇಳಿ3

ಹರಿನಾರಾಯಣನೆಂದು ಪ್ರಹ್ಲಾದ ಬರೆಯಲುದುರುಳದಾನವ ಅವನಿಗೆ ಮುನಿದು ||ಕರೆ ನಿನ್ನ ಒಡೆಯನ ಎಂದು ಗರ್ಜಿಸೆನರಹರಿಬಂದು ಒಡನೆಯೆ ಕಾಯ್ದನೆಂಬುದಕೇಳಿ4

ಅಂಬರೀಷಗೆದೂರ್ವಾಸಶಾಪವ ಕೊಡೆಅಂಬುಜಲೋಚನ ಚಕ್ರದಿಂದ ||ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದಕಂಬುಚಕ್ರಧರಹರಿಯೆಂಬುದಕೇಳಿ5

ಛಲಬೇಡ ರಾಮನ ಲಲನೆಯ ಬಿಡು ಎಂದುತಲೆಹತ್ತರವಗೆ ಪೇಳಲು ತಮ್ಮನ ||ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲುಸಲೆ ವಿಭೀಷಣಗೆ ಲಂಕೆಯನಿತ್ತುದನುಕೇಳಿ6

ಸುರ-ನರ-ನಾಗಲೋಕದ ಭಕ್ತ ಜನರನುಪೊರೆಯಲೋಸುಗ ವೈಕುಂಠದಿಂದ ||ಸಿರಿಸಹಿತದಿ ಬಂದು ಶೇಷಾಚಲದಿ ನಿಂತಪುರಂದರವಿಠಲ ನಿನ್ನಯ ಚರಣವ ಕಂಡು 7
**********