..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಹುಚ್ಚುಗೊಳಿಸುವರೆ ಮರುಳೆ ತರುಳಾರ
ಅಚ್ಚುತ ಪರಮ ಗಂಭೀರ ಪುರುಷನೆ ಪ
ಎಲ್ಲವು ಬಯಸುವ ಹಟದಿ ಶಿಸುವಿಗೆ
ಬೆಲ್ಲವ ತೋರಿಸಿ ನಿಲುದಿಪ್ಪೋದು1
ಮಿನುಗುವ ಮಣಿತೋರೆ ತನು ಬೆವರೆ ಪೋಗೆ
ಕನಡಿಭಾನಿಂದುದಕ ಕೆಳಗೊಳಿಸುವರೆ 2
ಕಪ್ಪು ವಸ್ತ್ರವ ಕಂಡು ನಡುಗುವಂಗೆ
ಕಪ್ಪ ಕಲ್ಪಿಸೆ ಅಪ್ಪಾ ಎನ್ನೆ ಅಪ್ಪಿ ನಗಿಸುವರೆ 3
ನಗುವ ಕೂಸಿನ ಅಳಿಸಿ ಮುದ್ದಾಡಿ
ನಗುಸುವೀ ನೀನು ಬಗೆ ಬಗೆಯಿಂದ 4
ಜೀವರ ಈ ಪರಿ ಮಾಡದಿದ್ದರೆ ವಾಸು
ದೇವವಿಠಲ ನೀ ಕಾಲ ಕಳೆವದೆಂತೊ 5
***