ಸಾಧುಸಜ್ಜನರೊಳಗಿರುವೋದೆ ಹಬ್ಬ
ವೇದಾಂತಧರ್ಮದ ತಿಳಿವೋದೆ ಹಬ್ಬ ||
ಭೇದಬುದ್ಧಿಗಳೆಲ್ಲ ಬಿಡುವೋದೆ ಹಬ್ಬ
ಭಾಗೀರಥಿಲಿ ಲೋಲಾಡುವುದೆ ಹಬ್ಬ ||
ಸಂಕಲ್ಪಸಿದ್ಧಿ ಮನಕೆ ದೊಡ್ಡ ಹಬ್ಬ
ನಿಶ್ಚಿಂತ ಯೋಗಿಗೆ ಅನುದಿನ ಹಬ್ಬ ||
ಸಾಲವಿಲ್ಲದವನ ಸಂಸಾರದಿ ಹಬ್ಬ
ಶರೀರಕ್ಕೆ ವ್ಯಾಧಿ ಬಾರದೊಂದೆ ಹಬ್ಬ ||
ಸಂಚಿತ ಕರ್ಮವು ಕಳೆವೋದೆ ಹಬ್ಬ
ಪಂಚಮುಖನಾಭನ ಭಜಿಸುವುದೆ ಹಬ್ಬ ||
ಕಂಗಳು ಕಾಶಿಯ ಕಾಂಬೋದೆ ಹಬ್ಬ
ಶ್ರೀವಿಶ್ವಪತಿಯ ಭಜಿಸುವುದೆ ಹಬ್ಬ ||
ಭೂಲೋಕದೊಳು ಕಾಶಿವಾಸವೆ ಹಬ್ಬ
ಪುರಂದರವಿಠಲನ್ನ ಭಜಿಸುವುದೆ ಹಬ್ಬ ||
****
ರಾಗ ಮಧ್ಯಮಾವತಿ ಆದಿತಾಳ (raga, taala may differ in audio)
rAgA: madhyamAvati. Adi tALA.
pallavi
sAdhu sajjana.
1: sAdhu sajjanaroLgiruvOde habba vEdAnta dharmada tiLivOde habba
caraNam 2
bhEda buddhigaLella biDuvOde habba bhAgIrathili lOlADuvude habba
caraNam 3
sankalpa siddhi manake doDDa habba nishcinta yOgige anudina habba
caraNam 4
sAlavilladavana samsAradi habba shArIrakke vyAdhi bAradonde habba
caraNam 5
sancita karmava kaLevode habba shrI vishvapatiya bhajisuvude habba
caraNam 6
bhUlOkadoLu kAshi vAsave habba purandara viTTalanna bhajisuvude habba
***