Showing posts with label ತಾನೇ ತಾನು ಜಗದಂತರ್ಯಾಮಿ ವಿಶ್ವಂಭರಿತಾ ತಾನೇ gurumahipati. Show all posts
Showing posts with label ತಾನೇ ತಾನು ಜಗದಂತರ್ಯಾಮಿ ವಿಶ್ವಂಭರಿತಾ ತಾನೇ gurumahipati. Show all posts

Wednesday, 1 September 2021

ತಾನೇ ತಾನು ಜಗದಂತರ್ಯಾಮಿ ವಿಶ್ವಂಭರಿತಾ ತಾನೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ತಾನೇ ತಾನು ಜಗದಂತರ್ಯಾಮಿ ವಿಶ್ವಂಭರಿತಾ ತಾನೇ ತಾನು ಹರಿಧ್ಯಾನ ಧನ ದಾನ ಮಾನ ಅಣುರೇಣುಗಳಲ್ಲಿ ಪ 

ವಬ್ಬಸೂರ್ಯಜಗ ಸರ್ವ ಚಕ್ಷಗಳ ಮಬ್ಬುಹಾರಿಸುವಂತೆ ಅ.ಪ 

ಘಟ ಮಠಾದಿಗಳ ಚದುಳ ಬ್ರಹ್ಮಘಟಿ ನೆಟಗೆ ವ್ಯಾಪ್ತ ನಿಚ್ಚಲ ಗಗನದಂತೆ 1 

ಕಂಭಸೂತ್ರದ ಬೊಂಬೆಯಾಟದಲಿ ಇಂಬುಗೊಂಡ ಕುಳೆ ಬಿಂಬಿಸುವಂತೆ2 

ಕಂದ ಕುಂದದಾನಂದ ಚಂದ ಘನ ತಂದೆ ಮಹಿಪತಿ ನಂದನ ಪ್ರೀಯಾ3

****