Showing posts with label ಏನು ಗತಿ ಏನುಗತಿ ಇನಕುಲೇಶ ಹೀನ ವಿಷಯದಿ narahari P. Show all posts
Showing posts with label ಏನು ಗತಿ ಏನುಗತಿ ಇನಕುಲೇಶ ಹೀನ ವಿಷಯದಿ narahari P. Show all posts

Thursday, 5 August 2021

ಏನು ಗತಿ ಏನುಗತಿ ಇನಕುಲೇಶ ಹೀನ ವಿಷಯದಿ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಏನುಗತಿ ಏನುಗತಿ ಇನಕುಲೇಶ
ಹೀನ ವಿಷಯದಿ ಮನ ಶ್ವಾನನಂತಿಟ್ಟ ಎನಗೇನು ಪ

ಮೂರು ಗುಣಗಳಿಂದ ಮೂರು ತಾಪಗಳಿಂದ
ಮೂರು ಈರೆರಡೊಂದು ಮದಗಳಿಂದ
ಮೂರು ಐದಾರಿಂದ ಮರೆತು ತನು ಮೂಲಗಳ
ಸ್ಮರಿಸದೇ ನರಹರಿಯ ನರಕಕ್ಕೆ ಗುರಿಯಾದ ಎನಗೆ 1

ಅತಿಥಿಗಳಿಗನ್ನ ಬಲು ಹಿತದಿ ಕೊಡದೆಲೆ ಪರ
ಸತಿಯ ಸಂಗದಿ ನೆಲಸಿ ಹಿತವ ಮರೆದು
ರತಿಪತಿಪಿತ ನಿನ್ನ ಸ್ತುತಿಸದೆ ಮತಿಗೆಟ್ಟು
ಕ್ಷಿತಿಯೊಳಗೆ ನಾನೊಬ್ಬ ಯತಿಯಂತೆ ಚರಿಪ 2

ಇನ್ನಾದರೆನ್ನ ಪಾವನ್ನ ಮಾಡಲು ನಿನ್ನ
ಘನ್ನ ಉಪಕೃತಿ ಮರಿಯೆ ಶ್ರೀ ನರಹರಿಯೆ
ನಿನ್ನ ಪೊರತನ್ಯರನು ಮನ್ನಿಸುವರ ಕಾಣೆ
ಬೆನ್ನ ಬಿದ್ದೆನೊ ದಯವನ್ನು ಮಾಡೆಲೋ ಬೇಗ3
***