ರಚನೆ : ಶ್ರೀ ವಾದಿವಂದ್ಯ ತೀರ್ಥರು
ಅಂಕಿತ " ಶ್ರೀಹರಿಪ್ರಸಾದಾಂಕಿತ " ವಾದಿವಂದ್ಯ "
ಶ್ರೀವಾದಿವಂದ್ಯತೀರ್ಥ ಕೃತ ಶ್ರೀವಾದಿರಾಜರ ಸ್ತೋತ್ರ ಪದ
ರಾಗ : ಸಾರಮತಿ ತಿಶ್ರನಡೆ
ಮರೆಹೊಕ್ಕೆ ನಾ ನಿನ್ನ ಮೌಳಿ ಶಿರೋರನ್ನ
ಗುರುವಾದಿರಾಜೇಂದ್ರ ಗುಣಗಣಸಾಂದ್ರ॥ಪ॥
ಸಿರಿಹಯವದನ ಚರಣಾರವಿಂದಗಳ
ನಿರತ ಪೂಜಿಪ ಯತಿವರ ಚಿಂತಾಮಣಿಯೆ॥ಅ.ಪ॥
ಸದ್ಧರ್ಮ ಪರಿಪಾಲ ಸತ್ಕರ್ಮ ಶೀಲ
ಶುದ್ಧ ಶಾಸ್ತ್ರವಿಚಾರ ಸುವರ್ಣಾಕಾರ
ಮಧ್ವಮತವನೆಲ್ಲ ಉದ್ಧರಿಸಿದ ಪ್ರ-
ಸಿದ್ಧ ನೆನಿಪ ಪ್ರಬುದ್ಧ ಯೋಗೀಶ
ವಿದ್ವತ್ಸಭೆಯೊಳು ಹೃದ್ಯನಾಗಿ ತೋರುವ
ಕೃದ್ಧಜನದೂರ ಶುದ್ಧಸಂಪೂಜಿತ॥೧॥
ಪಂಡೀತಜನ ಪ್ರೇಮ ಪರಮಹಂಸ ಸ್ತೋಮ
ಚಂಡ ಶಾಸನ ನಾಮ ಚದುರ ನಿಸ್ಸೀಮ
ತಂಡದ ವಾದಿಗಜ ಗಂಡಭೇರುಂಡ
ಹಿಂಡು ದುರಿತಾಂಡ ಮಾರ್ತಾಂಡ ಸುಧೀರ
ತೋಂಡರ ಪಾಲಿಪ ಪ್ರಚಂಢ ಸನ್ಮೂರುತಿ
ದಂಡವ ಪಿಢಿದ ಉದ್ಧಂಡ ಮುನಿಪನೆ॥೨॥
ವಾದಿವಂದ್ಯರ ಧೀರ ವರಸೋದೆ ವಾಸ
ಮಾಧವನ ಭಕ್ತ ಮಾಸಾದ್ವಿರಕ್ತ
ಪಾದತೀರ್ಥವನು ಮೋದದಿ ಧರಿಸುವ
ಸಾಧುಜನರನು ಆದರಿಸಿ ಪೊರದು
ಮೇದಿನಿಯೊಳು ಕೀರ್ತಿ ಸಾಧಿಸಿ ಮೆರದು
ವಿನೋದದಿಂದಲಿ ಖ್ಯಾತಿಯಾದ ಮುನಿಪನೆ॥೩॥
***
ಮರೆ ಹೊಕ್ಕೆ ನಾನಿನ್ನ -
ಮೌಳಿ ಶಿರೋರನ್ನ ।
ಗುರು ವಾದಿರಾಜೇಂದ್ರ -
ಗುಣಗಣ ಸಾಂದ್ರಾ ।। ಪಲ್ಲವಿ ।।
ಸಿರಿ ಹಯವದನನ
ಚರಣಾರವಿಂದಗಳ ।
ನಿರತ ಪೂಜಿಪ ಯತಿ-
ವರ ಚಿಂತಾಮಣಿಯ ।। ಅ ಪ ।।
... ವಾದಿವಂದ್ಯರ ಧೀರ -
ವರ ಸೋದೆ ವಾಸ ।
ಮಾಧವನ ಭಕ್ತ -
ಮಾಸಾದ್ವಿರಕ್ತ ।
ಪಾದ ತೀರ್ಥವನು
ಮೋದದಿ ಧರಿಸುವ ।
ಸಾಧು ಜನರನು
ಆದರಿಸಿ ಪೊರೆದು ।
ಮೇದಿನಿಯೊಳು ಕೀರ್ತಿ
ಸಾಧಿಸಿ ಮೆರೆದು ।
ವಿನೋದದಿಂದಲಿ
ಖ್ಯಾತಿಯಾದ ಮುನಿಪನೆ ।। 3 ।।
*****
https://drive.google.com/file/d/1wJ_Y79jEiv583E_LQv9_jTu44ZvRcyBP/view?usp=drivesdk