Showing posts with label ಚೈತ್ರಮಾಸದ ಕೃಷ್ಣಪಕ್ಷ ಷಷ್ಠಿಯಲಿ ಚೈತ್ರದುತ್ಸವ ಗೀತೆ venkatakrishna. Show all posts
Showing posts with label ಚೈತ್ರಮಾಸದ ಕೃಷ್ಣಪಕ್ಷ ಷಷ್ಠಿಯಲಿ ಚೈತ್ರದುತ್ಸವ ಗೀತೆ venkatakrishna. Show all posts

Tuesday, 1 June 2021

ಚೈತ್ರಮಾಸದ ಕೃಷ್ಣಪಕ್ಷ ಷಷ್ಠಿಯಲಿ ಚೈತ್ರದುತ್ಸವ ಗೀತೆ ankita venkatakrishna

 by yadugiriyamma

ಚೈತ್ರದುತ್ಸವ ಗೀತೆ


ಚೈತ್ರಮಾಸದ ಕೃಷ್ಣಪಕ್ಷ ಷಷ್ಠಿಯಲಿ
ಕಟ್ಟಿ[ದರು] ಕಂಕಣವನು ಸೃಷ್ಟಿಗೀಶ್ವರಗೆ ಪ.

ಮೊದಲು ದಿವÀಸದಿ ಧ್ವಜಪಟವನೇರಿಸಿ
ನದಿಗಳೆಲ್ಲವ ಕರೆದು ಭೇರಿಯಿಂದ ಸುರರು 1
ಯಾಗಶಾಲೆಯ ಪೊಕ್ಕು ಯಾತ್ರದಾನವ ಬೇಡಿ
ಯಾಗಪೂರ್ತಿಯ ಮಾಡಿ ಸೂತ್ರ ಧರಿಸಿದರು 2
ಸರ್ಪಮೊದಲಾದ ಅಲ್ಲಿರ್ಪ ವಾಹನವೇರಿ ಕಂ
ದರ್ಪನಪಿತ ಬಂದ ಚಮತ್ಕಾರದಿಂದ 3
ಬೆಂಡಿನ ಚಪ್ಪರ ಬೆಳ್ಳಿಕುದುರೆಯನೇರಿ
ಪಾಂಡವಪಕ್ಷ ಬಂದ ಪುಂಡರೀಕಾಕ್ಷ 4
ರೇವತಿ ನಕ್ಷತ್ರದಲಿ ಏರಿ ರಥವನ್ನು
[ತಾ] ವೈಯ್ಯಾರದಿಂದಲೆ ಬಂದ ವಾರಿಜನಾಭ 5
ಗೋವಿಂದ ಗೋವಿಂದಯೆಂದು ಪ್ರಜೆಗಳು
[ತಾವಾ]ನಂದದಿಂದ ನೋಡಿ ಪಾಡುತ್ತ 6
ಗೋವುಗಾಣಿಕೆಯನ್ನು ಗೋಪಾಲರು ತಂದು ನೀ
ಲಾವರ್ಣನಿಗಿತ್ತರು ನೇಮದಿಂ ಪೂಜೆಯ 7
ಧ್ವಜಮಂಟಪದಲ್ಲಿ ಹರಿಭಜನೆಗಳ ಮಾಡು[ತ್ತಿರೆ]
ಭುಜಗಶಯನನು ವರವಿತ್ತು ಕಳುಹಿದನು 8
ಸಪ್ತಾವರಣವ ಸುತ್ತಿ ತೀರ್ಥವನಿತ್ತು
ಅರ್ಥಿಯಿಂದಲೆ ಬಂದ ಭಕ್ತವತ್ಸಲನು 9
ಬೊಂಬೆ ಅಂದಣವೇರಿ[ದ] ಅಂಬುಜನಾಭ
ಕುಂಭಿಣಿಗಧಿಕವೆಂತೆಂಬ ಶ್ರೀರಂಗ 10
ಚಿತ್ರರಥ[ದ] ವಿಚಿತ್ರಮೂರುತಿಯ ನೋಡಿ ಪ
ವಿತ್ರರಾದರು ಧಾತ್ರಿ[ಯ] ಉತ್ತಮರೆಲ್ಲ 11
ಬಂದ ಪ್ರಜೆಗಳು ಎಲ್ಲ ಆನಂದದಿ ಪೋಗೆ
ಬಂದು ಆಸ್ಥಾನದಿ ನಿಂದ ಶ್ರೀರಂಗ 12
ಸೃಷ್ಟಿಯಲಿ ಪುಟ್ಟಿದ ದುಷ್ಟಪ್ರಾಣಿಗಳ [ನೆಲ್ಲ]
ಶ್ರೇಷ್ಠ ಮಾಡಲಿ [ನಮ್ಮ] ವೆಂಕಟರಂಗ 13
****