ರಾಗ ಯಮುನಾ ತ್ರಿಪುಟತಾಳ
ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ ||ಪ||
ಅಟ್ಟಾದಡಿಗೆ ಬಿಟ್ಟು ಆಚೆಮನೆಯ ಬಿಟ್ಟು
ಮೃಷ್ಟಾನ್ನವ ನೀ ಬಯಸಿದರಿಲ್ಲ ||ಅ||
ಹೆಣ್ಣಿನ ದೆಸೆಯಿಂದ ಬರುವದು ಇಲ್ಲ
ಅನ್ಯ ದೇವತೆಗಳ ಪೂಜಿಸಿದರು ಇಲ್ಲ
ಅನ್ಯರ ಕಾಡಿ ಬೇಡಿದರು ಇಲ್ಲ
ತನ್ನ ಪುಣ್ಯಫಲವು ತನಗೆ ಇಲ್ಲದಿಲ್ಲ ||
ಊಳಿಗವನು ನೀ ಮಾಡಿದರು ಇಲ್ಲ
ಊರನಾಳುವುದಕೆ ಸೇರಿದರು ಇಲ್ಲ
ಹೇರಳ ವಿದ್ಯಾ ಕಲಿತರು ಇಲ್ಲ
ನೀರೊಳಗಿ ಮುಳುಗಿ ಜಪವ ಮಾಡಿದರಿಲ್ಲ ||
ಬಟ್ಟಲು ಪಿಡಿದು ಬಾಯಿ ಬಿಟ್ಟು ಕೇಳಿದರಿಲ್ಲ
ಅಟ್ಟಾದಡವಿಯೊಳು ಕುಳಿತರು ಇಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ
ಕೊಟ್ಟವರಿಗುಂಟು ಕೊಡದವರಿಗಿಲ್ಲ ||
***
ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ ||ಪ||
ಅಟ್ಟಾದಡಿಗೆ ಬಿಟ್ಟು ಆಚೆಮನೆಯ ಬಿಟ್ಟು
ಮೃಷ್ಟಾನ್ನವ ನೀ ಬಯಸಿದರಿಲ್ಲ ||ಅ||
ಹೆಣ್ಣಿನ ದೆಸೆಯಿಂದ ಬರುವದು ಇಲ್ಲ
ಅನ್ಯ ದೇವತೆಗಳ ಪೂಜಿಸಿದರು ಇಲ್ಲ
ಅನ್ಯರ ಕಾಡಿ ಬೇಡಿದರು ಇಲ್ಲ
ತನ್ನ ಪುಣ್ಯಫಲವು ತನಗೆ ಇಲ್ಲದಿಲ್ಲ ||
ಊಳಿಗವನು ನೀ ಮಾಡಿದರು ಇಲ್ಲ
ಊರನಾಳುವುದಕೆ ಸೇರಿದರು ಇಲ್ಲ
ಹೇರಳ ವಿದ್ಯಾ ಕಲಿತರು ಇಲ್ಲ
ನೀರೊಳಗಿ ಮುಳುಗಿ ಜಪವ ಮಾಡಿದರಿಲ್ಲ ||
ಬಟ್ಟಲು ಪಿಡಿದು ಬಾಯಿ ಬಿಟ್ಟು ಕೇಳಿದರಿಲ್ಲ
ಅಟ್ಟಾದಡವಿಯೊಳು ಕುಳಿತರು ಇಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ
ಕೊಟ್ಟವರಿಗುಂಟು ಕೊಡದವರಿಗಿಲ್ಲ ||
***
pallavi
iSTAdaru munna koTTiladilla
anupallavi
aTTAdaDige biTTu Acamaneya biTTu mrSTAnnava nI bayasidarilla
caraNam 1
heNNina deseyinda baruvudu illa anya dEvategaLa pUjisidaru illa
anyara kADi bEDidaru illa tanna puNya balavu tanage illadilla
caraNam 2
Uligavanu nI mADidaru illa UranALuvudake sEridaru illa
hEraLa vidyA kalitaru illa nIroLage muLugi japava mADidarilla
caraNam 3
baTTalu piDidu bAyi biTTu kELidarilla kaTTAdaDaviyoLu kuLitaru illa
shrStiyALage namma purandara viTTala koTTavariguNDu koDadavarigilla
***