..
kruti by bhupati vittalaru ( kakhandaki Ramacharyaru)
ಗೋಪಾಲದಾಸರಾಯರ ಪಾದ ನಂಬಿದರೆತಾಪತ್ರಯವ ಕಳೆವರು ಭೂಪಾಲಮಧ್ಯ ಪಾದಾಬ್ಜಸದ್ಗುರು ಜಗನ್ನಾಥದಾಸರಿಗೆ ತಮ್ಮಾಯುಷ್ಯ ನೀಡಿದ ಪ
'ವಿಜಯದಾಸರ ಪರಮ ಪ್ರೀತಿ ಪಾತ್ರರು ಇವರುಪರಮ ಭಗವದಭಕ್ತರು 'ಭಕ್ತಿಯಲಿ ಭಾಗಣ'್ಣ ನೆಂಬ ಗೌರವ ಪಡೆದಭಾಗ್ಯಶಾಲಿಗಳು ಇವರು ಸುಖದ ಪ್ರಾರಬ್ಧ'ವರದು ರಾಜಯೋಗಿಗಳುದುಃಖವೆಂಬುದೆ ಅರಿಯರು ನಿತ್ಯಾ ಉತ್ಸವ ನಿತ್ಯ ಮಂಗಲವು ಇವರು ಇದ್ದಲ್ಲಿ ನಿತ್ಯ ಸುಖವೇ ಸುಖವು 1
ಜ್ಞಾನ ಗಂಗಾ ನದಿಯು ವೈರಾಗ್ಯ ಯಮುನೆಯು ಸದ್ಭಕ್ತಿ ಸರಸ್ವತೀ ಈ ಬಗೆಯ ತ್ರಿವೇಣಿಸಂಗಮವು ಇವರಲ್ಲಿ ಎದ್ದು ಕಾಣುವದು ನಿತ್ಯ 'ಜಯರಾಯರ ನೆರಳಿನಿಂದಲಿ ಸರ್ವದಾ ಅವರಲ್ಲಿ ಇವರವಾಸಗುರುಭಕ್ತಿಯಲಿ ಇವರ ಸರಿ'ುಗಿಲು ಯಾರಿಲ್ಲಭಾಗಣ್ಣದಾಸರಿವರೇ ಅವರು 2
ಪಂಢರಾಪುರದ ಶ್ರೀ ಪಾಂಡುರಂಗನು ಇವರ ಭಕ್ತಿಭಾವಕೆ ಮೆಚ್ಚಿದಾಬಹುದಿವಸ ತನ್ನದರುಷನಕೆ ಬರಲಿಲ್ಲೆಂದು ಕಳವಳದಿ ಪಾಂಡುರಂಗಾಕುದುರೆಯನು ಏರಿ ತಾನೆ ಅವರಬಳಿ ಪೋಗಿ 'ಆಲೆ ನಾ'' ಎಂದು ಕರೆದಾಮರುದಿನವೆ ಪಂಢರಿಗೆ ತ್ವರದಿ ಓಡುತ ಹೋಗಿಭೂಪತಿ'ಠ್ಠಲನ ಬಿಗಿದೊಪ್ಪಿಕೊಂಡಾ 3
***