Showing posts with label ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ varaha timmappa. Show all posts
Showing posts with label ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ varaha timmappa. Show all posts

Friday, 27 December 2019

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ ankita varaha timmappa

by ನೆಕ್ಕರ ಕೃಷ್ಣದಾಸರು
ಶಂಕರಾಭರಣ ರಾಗ ಆದಿತಾಳ

ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ
ಕಾಮಿತಾರ್ಥವನೀವ ಕರುಣ ಸಂಜೀವ ||ಪ||

ಸುರರು ಅಸುರರೆಲ್ಲ ಶರಧಿಯ ಮಥಿಸಲು
ಸಿರಿಯು ಜನಿಸಿ ಬಂದು ಹರಿಯ ಸೇರಿದಳು ||೧||

ಪತಿ ನೀನೆ ಗತಿಯೆಂದು ಸತಿ ಕುಸುಮಮಾಲೆಯನು
ಅತಿ ಹರುಷದಿ ಜಗತ್ಪತಿಗೆ ಇಕ್ಕಿದಳು ||೨||

ವಾರಿಧಿಯಾಕ್ಷಣ ಧಾರೆಯನೆರೆಯಲು
ವಾರಿಜಾಂಬಕಲಕ್ಷ್ಮಿ ಒಡನೆ ನಿಂದಿರಲು ||೩||

ಫಣ್ಫಿಹ್ತ್ರಸೆಮೆಣೆಯೊಳು ರಮಣಿಯನೊಡಗೊಂಡು
ಗುಣನಿಧಿಯ ಒಪ್ಪಿರಲು ತರುಣಿಯರೆಲ್ಲ ||೪||

ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು
ಅಚ್ಯುತ ಮಹಾಲಕ್ಷ್ಮಿಗ್ಹಚ್ಚಬೇಕೆನುತ ||೫||

ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ
ಪುಣ್ಯವಂತೆಗೆ ಕೈಗರ್ಣವ ಕೊದಲು ||೬||

ಮೊದಲು ಪಾದವ ತೊಳೆದು ಜಲವನ್ನು ಸಿರಿ ತನ್ನ
ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು ||೭||

ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ
ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ ||೮||

ಅಂಗೈಯ ಅರಿಸಿಣವ ಮುಂಗೈಗೆ ಒರೆಸುತ್ತ
ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ ||೯||

ಅಭಯ ಹಸ್ತವನಿತ್ತ ತ್ರಿಭುವನದೊಡೆಯನು
ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು ||೧೦||

ಅತಿಹರುಷವ ತಾಳಿ ಸತಿ ಕೈಯ ಅರಿಷಿಣವ
ಪತಿ ಆದಿಕೇಶವನ ನುತಿಸಿ ಊರಿದಳು ||೧೧||

ಸಿರಿಯನೆತ್ತಿದ ಕೈಯ ಹರಿ ತಾನು ತೋರಿಸಲು
ಸಿರಿ ನಾರಾಯಣ ಎಂದು ಅರಿಷಿಣವ ತಿಮುರೆ ||೧೨||

ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು
ವೇಂಕಟೇಶನ ಕರಪಂಕಜಕೆ ತಿಮುರೆ ||೧೩||

ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು
ಮಧುಸೂಧನ ಶ್ರೀ ವತ್ಸದೆದೆಯ ತೋರೆನುತ ||೧೪||

ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ
ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ ||೧೫||

ವಾಮನನಾಗೆ ಶ್ರಮವನು ಪಟ್ಟೆ(ಎ)ನುತ
ಭೂಮಿಯ ಅಳೆದ ಪಾದವಿತ್ತನು ತಾರೆನುತ ||೧೬||

ಕಾದಲನು ಕಾಣುತ್ತ ಪಾದವನಿತ್ತನು
ಶ್ರೀಧರನೆನುತಲಿ ಅರಸಿನವ ತಿಮುರೆ ||೧೭||

ವಾಮಪಾದವ ಕಂಡು ಭಾಮಿನಿ ತಾರೆನಲು
ಸೋಮಸನ್ನಿಭ ಹೃಷಿಕೇಶ ತಾನಿತ್ತ ||೧೮||

ಪದ್ಮ ಬಾಂಧವ ತೇಜ ಸಂಭವ ಪೂಜ
ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ ||೧೯||

ಆ ಮಹಾನಾಮದ ದಾಮೋದರನ ಕಂಡು
ಭಾವೆ ಲಕ್ಷುಮಿ ವೀಳ್ಯವ ಕೊಡಲು ||೨೦||

ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ
ಪೂಸಿದನರಿಸಿನವ ಎಣ್ಣೆಯ ಮೊಗಕೆ ||೨೧||

ಪಂಕಜಾಕ್ಷನ ಕಂಡು ಕಂಕಣದ ಹಸ್ತವ ನೋಡಿ
ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ||೨೨||

ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ
ಉದ್ಧರಿಸಿ ನವ ಪ್ರದ್ಯುಮ್ನ ನಗುತ ||೨೩||

ಮುನಿಜನ ವಂದ್ಯನು ಅನಿರುದ್ಧ ನಗುತಲೆ
ಘನಕುಚಮಂಡಲಕೆ ಅರಿಸಿನವ ತಿಮುರೆ ||೨೪||

ಪುರುಷರೊಳು ಉತ್ತಮನು ಹರುಷವನು ತಾಳಿಯೆ
ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ ||೨೫||

ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ
ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ ||೨೬||

ನಾರಸಿಂಹನು ಸತಿಯ ಮೋರೆಯಿಂದಾರಭ್ಯ
ಓರಣವಾಗಿಯೆ ಅರಿಸಿನವ ತಿಮುರೆ ||೨೭||

ನೆಚ್ಚಿಯೆ ಹರಿ ತಾನು ಅಚ್ಚಕರ್ಪುರದೆಲೆಯ
ಆಶ್ಚರ್ಯವಾಗಿಯೆ ಅಚ್ಯುತ ಕೊಡಲು ||೨೮||

ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ
ತನಗೆ ವಲ್ಲಭ ನಿಜನಾದನೆನುತ ||೨೯||

ಆ ಪರಮಹಿಮನು ರೂಪಸಂಪನ್ನ ದ-
ಯಾಪರನಾಗಿಯೆ ಉಪೇಂದ್ರ ತಾನೊಲಿದು ||೩೦||

ಹರ ಎಂಬ ನಾಮದಿ ಹರದಿ ಮಾಲಕ್ಷ್ಮಿಯ
ವರಿಸಿದ ಶ್ರೀಹರಿಯು ಹರದಿಯರ್ಪೊಗಳೆ ||೩೧||

ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ
ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ ||೩೨||

ವರಮಹಾಲಕ್ಷುಮಿಗೆ ವರಾಹ ತಿಮ್ಮಪ್ಪಗೆ
ಅರಸಿನದೆಣ್ಣೆಯ ರಚಿಸಿದ ಪರಿಯು ||೩೩||
******