ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸು ಮನವೆ ಸ್ಮರಿಸು ಮನವೆ ಹರಿಯ ಚರಣ ಕಮಲವ ಪೂರ್ಣ ಶರಣ ಜನರನಾ ಹೊರೆದು ರಕ್ಷಿಸುವ ಉರಗಶಯನನಾ 1
ಇರುಳ ಹಗಲ ಸೆರಗವಿಡಿದು ಅರಿತು ಸ್ಮರಿಸು ಬೆರಿಸಿ ಚಿತ್ತವ ಕರೆವ ಕಾಮಧೇನುವಾಗಿ ಹೊರೆವ ಕಪ್ಪುತರುವಿನ 2
ಬಿಡದೆ ಸ್ಮರಿಸು ಗೂಡಿನೊಳಗೆ ಪಾದ ಪೂರ್ಣ ಕುಡುವ ಭಕ್ತಿ ಮುಕ್ತಿದಾತ ಮಹಿಪತಿಯ ಒಡಿಯನ 3
***