Wednesday, 1 September 2021

ಸ್ಮರಿಸು ಮನವೆ ಸ್ಮರಿಸು ಮನವೆ ಹರಿಯ ಚರಣ ಕಮಲವ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ಮರಿಸು ಮನವೆ ಸ್ಮರಿಸು ಮನವೆ ಹರಿಯ ಚರಣ ಕಮಲವ ಪೂರ್ಣ ಶರಣ ಜನರನಾ ಹೊರೆದು ರಕ್ಷಿಸುವ ಉರಗಶಯನನಾ 1 

ಇರುಳ ಹಗಲ ಸೆರಗವಿಡಿದು ಅರಿತು ಸ್ಮರಿಸು ಬೆರಿಸಿ ಚಿತ್ತವ ಕರೆವ ಕಾಮಧೇನುವಾಗಿ ಹೊರೆವ ಕಪ್ಪುತರುವಿನ 2 

ಬಿಡದೆ ಸ್ಮರಿಸು ಗೂಡಿನೊಳಗೆ ಪಾದ ಪೂರ್ಣ ಕುಡುವ ಭಕ್ತಿ ಮುಕ್ತಿದಾತ ಮಹಿಪತಿಯ ಒಡಿಯನ 3

***


No comments:

Post a Comment