..
ಬಾರೋ ಹೋಗುವ ನಡಿ ಮನೆಗೆ ಇಂದಿರೇಶ ಪ
ಬಾರೋ ಎನ್ನ ಮನಸೆಂಬ ಮನೆಗೇ ಅ.ಪ.
ಕಣ್ಣಾ ಬಿಡಲು ಬ್ಯಾಡ ಜಲ-ವನ್ನು ಹೊಗಲಿ ಬೇಡ |ಮಣ್ಣಿಗಾಗಿ ದೈತ್ಯನ ನೀಗಿಚಿನ್ನಗೊಲಿದು ಹೋಗುವರೇನೋ 1
ತಿರಿಕಿ ಬೇಡಿದವನೇ ತಾಯಿ-ಶಿರವಾ ತರಿದವನೇ |ಕರಡಿ ಕಪಿ ಅಳಲುತರುಣರೊಡನೆ ಹೋಗದಲಿರೋ 2
ಬತ್ತಲೇ ನಿಂತಿದ್ದವನೆ ಹಯ-ಹತ್ತಿ ಓಡಿಸಿದವನೇ |ಚಿತ್ತದೊಡೆಯ ಮೋಹನ್ನ ವಿಠಲಎತ್ತಿ ಕರವ ಮುಗಿವೆ ಲೇಸೆಂದೂ 3
***