Showing posts with label ವಾಸಕೆ ಯೋಗ್ಯವಲ್ಲ ಗೋಕುಲವಿನ್ನು purandara vittala. Show all posts
Showing posts with label ವಾಸಕೆ ಯೋಗ್ಯವಲ್ಲ ಗೋಕುಲವಿನ್ನು purandara vittala. Show all posts

Saturday, 7 December 2019

ವಾಸಕೆ ಯೋಗ್ಯವಲ್ಲ ಗೋಕುಲವಿನ್ನು purandara vittala

ರಾಗ ಸುರುಟಿ ಆದಿತಾಳ

ವಾಸಕೆ ಯೋಗ್ಯವಲ್ಲ ಗೋಕುಲವಿನ್ನು
ಬೇಸರವಾಯಿತಲ್ಲ ||ಪ||
ದೋಷ ರಹಿತ ಸೋಳ ಸಾಸಿರ ಹೆಂಗಳ
ಶೇಷಶಯನ ಕೃಷ್ಣ ಮೋಸ ಮಾಡಿದ ಮೇಲೆ ||ಅ||

ರಂಗ ಮಧುರೆಗೆಂದು ಅಕ್ರೂರನ
ಸಂಗಡ ಪೋದನಂತೆ
ಆಂಗಜನಯ್ಯನ ಸಂಗವಿಲ್ಲದ ಮೇಲೆ
ಹೆಂಗಳ ಜನ್ಮವಿನ್ನೇತಕೆ ಸುಡಲಿ ||

ನಳಿನಾಕ್ಷ ಮಧುರೆಗೆಂದು ಪೋಗುವಂಥ
ಸುಳಿವು ತಿಳಿಯಲಿಲ್ಲವು
ಅಳಿ ಗಿಳಿ ಕೋಕಿಲೆಗಳ ರವವನು ಕೇಳಿ
ಗಳಿಗೆ ಕಳೆವುದೊಂದು ಯುಗವಾದ ಬಳಿಕಿನ್ನು ||

ಪತಿ ಸುತರನ್ನು ಬಿಟ್ಟು ಶ್ರೀಪತಿ ನೀನೇ
ಗತಿಯೆಂದು ನಂಬಿರಲು
ಮತಿವಂತಕ್ರೂರನ ಜೊತೆಯೊಳು ಶ್ರೀಹರಿ
ರಥವೇರಿ ತಾನು ಮಧುರೆಗೆ ಪೋದ ಮೇಲೆ ||

ಮಡದಿಯರಂತೆ ನಾವು ಒಡೆಯನೆಂದು
ದೃಢದಿ ನಂಬಿದ್ದೆವಮ್ಮ
ಕಡುಚೆಲ್ವ ಕೃಷ್ಣನು ನಡುನೀರಲಿ ಕೈಯ
ಪಿಡಿಯದೆ ಬಿಟ್ಟು ತಾ ಕಡೆಗೆ ಸಾರಿದ ಮೇಲೆ ||

ಅಚ್ಯುತಾನಂತನು ನಮ್ಮವನೆಂದು
ನೆಚ್ಚಿಕೊಂಡಿದ್ದೆವಮ್ಮ
ಮೆಚ್ಚಿದ ಬಾಲೆಯರಿಗ್ಹುಚ್ಚು ಹಿಡಿಸಿ ಕ್ರೂರ
ಹೆಚ್ಚಿದ ಮಾತನು ಕೊಚ್ಚಿ ಪೋದ ಮೇಲೆ ||

ಮುರಳಿ ನಾದವ ಕೇಳಿ ತರಳಾಕ್ಷಿಯರು
ಮರುಳಾಗಿ ಬರುತಿದ್ದೆವೆ
ದುರುಳ ಮನ್ಮಥನ ಪೂಸರಳಿಗೆ ಒಪ್ಪಿಸಿ
ಇರುಳೇ ಮಧುರೆಗೆ ತೆರಳಿ ಪೋದ ಮೇಲೆ ||

ಸುರತಸುಖಗಳೆಂಬ ಶರಧಿಯೊಳು
ಹರುಷಪಡುತಲಿದ್ದೆವೆ ನಿರುತ
ಅವನ ಗುಣಚರಿತೆಯ ತೋರದೆ
ತ್ವರಿತದಿ ನಮ್ಮನು ತೊರೆದು ಪೋದ ಮೇಲೆ ||

ಕಂತುಪಿತನ ಕಾಣದೆ ಈ ಪ್ರಾಣವು
ಎಂತು ನಿಲ್ಲುವುದಮ್ಮ
ಅಂತರಂಗದ ಕಾಮ ಶಾಂತಮಾಡದೆ ಪೋದ
ಕಾಂತನ ಕಾಣದೆ ಭ್ರಾಂತರಾದ ಮೇಲೆ ||

ಇಂದಿರಾಪತಿ ನಮ್ಮ ಮಂದಿರದೊಳು
ಬಂದು ಪೋಗುತಿರಲು
ಸಂದೇಹದಿ ಇವನ ಹೊಂದಿದರಿವರೆಂದು
ಮಂದಿಯೊಳಗೆ ಅಪನಿಂದೆ ಪೊತ್ತೆವಮ್ಮ ||

ಜಾರೆಯರಾದರೆಂದು ನಮ್ಮವರೆಲ್ಲ
ಸಾರಿ ಕೈ ಬಿಟ್ಟರಮ್ಮ
ವಾರಿಜಾಕ್ಷನು ಬರಿ ದೂರಿಗೆ ಗುರಿ ಮಾಡಿ
ದಾರಿ ತೋರದೆ ಪೋದನಾರ ಸೇರುವೆವಮ್ಮ ||

ಬೆರೆವುದಿನ್ನೆಂತು ನಾವು ಶ್ರೀಹರಿಸಂಗ
ದೊರೆವುದಿನ್ನೆಂದಿಗಮ್ಮ
ಕರುಣಾಕರ ನಮ್ಮ ಪುರಂದರವಿಠಲನು
ಕರೆದುಕೊಳ್ಳದೆ ನಮ್ಮ ತೊರೆದು ಪೋದ ಮೇಲೆ ||
***

pallavi

vAsake yOgyavalla gOkulavinnu bEsaravAyitalla

anupallavi

dOSa rahita sOLa sAsira hengaLa shESa shayana krSNa mOsa mADida mEle

caraNam 1

ranga mathuregendu akrUrana sankaTa pOdanante
Angajanayyana sangavillada mEle hengaLa janmavinnEtake suDali

caraNam 2

naLinAkSa mathurakendu pOguvanda suLivu tiLiyalillavu aLi giLi
kOkilegaLa ravavanu kELi gaLige kaLevudondu yugavAda baLikinnu

caraNam 3

pati sutarannu biTTu shrIpati nInE gatiyendu nambiralu mativanta
akrUrana joteyoLu shrIhari rathavEri tAnu mathurege pOda mEle

caraNam 4

maDadiyarante nAvu oDeyanendu drDhadi nambiddevamma kaDu
celva krSNanu naDu nIrali kaiya piDiyade biTTu tA kaDege sArida mEle

caraNam 5

acyutAnantanu nammavanendu necci koNDiddevamma meccida
bAleyarighuccu hiDisi krUra heccida mAtanu kocci pOda mEle

caraNam 6

muraLi nAdava kELi taraLAkSiyaru maruLAgi barutiddEve duruLa
manmathana pusaraLige oppisi iruLE mathurage teraLi pOda mEle

caraNam 7

surata sukhagaLemba sharadhiyoLu haruSapaDutaliddeve niruta
avana guNa cariteya tOrade dvaritadi nammanu toredu pOda mEle

caraNam 8

kantupitana kANade I prANavu endu nilluvutamma antarangada
kAma shAnta mADade pOda kAntana kANade bhrAntarAda mEle

caraNam 9

indirApati namma mandiradoLu bandu pOgudiralu sandEhadi
ivana hondidarivarendu mandiyoLage apa ninde pottevamma

caraNam 10

jAreyarAdarendu nammavarella sAri kai biTTaramma vArijAkSanu
bari dUrige guri mADi dAri tOrade pOdanAra sEruvevamma

caraNam 11

beravudinnendu nAvu shrI harisanga dorevudinnendigamma karuNAkara
namma purandara viTTalanu karedu koLLade namma toredu pOda mEle
***