..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಸ್ವೀಕರಿಸೈ ಲೋಕನಾಥನೆ ಪ್ರಖ್ಯಾತಪ್ರಿಯನೆ ತಾಂಬೂಲವ ಪ
ನೀಲವೇಣಿಯು ಜಾಲಮಾಡದೆ ಶೀಲದಿಂ ಈ ವೀಳ್ಯವ
ವೇಳೆಯರಿತು ತಂದಿಹೆನು ಗೋಪಾಲಬಾಲ ತಾಂಬೂಲವ 1
ಕಮಲ ನಯನೆ ಕಮಲವದನೆ ವಿಮಲ ಮನದಲಿ ವೀಳ್ಯವ
ಕ್ರಮದಿ ತಂದು ನಿಂದಿರುವೆನೊ ಸುಮಧುರವಾದೀ
ತಾಂಬೂಲವ 2
ಗಾನಲೋಲನೆ ದೀನಪಾಲನೆ ಪ್ರಾಣನಾಥವಿಠಲನೆ
ಸಾನುರಾಗದಿ ತಂದ ವೀಳ್ಯವ ಪ್ರಾಣನಾಥನೆ ಕರುಣದಿಂ3
***