ಶ್ರೀ ಬ್ರಹ್ಮಣ್ಯತೀರ್ಥ ವೃಂದಾವನ ಬಂಧಃ
[ ಬಂಧ ಶ್ಲೋಕ ವ್ಯಾಖ್ಯಾನಮ್ ]
ಕಂಸಧ್ವಂಸಿ ಪದಾಂಭೋಜ
ಸಂಸಕ್ತೋ ಹಂಸಪುಂಗವಃ ।
ಬ್ರಹ್ಮಣ್ಯ ಗುರುರಾಜಾಖ್ಯೋ
ವರ್ತತಾಂ ಮಮ ಮಾನಸೇ ।।
" ಬಂಧ ಲಕ್ಷಣಂ ತು "
ಚತುರಸ್ರೇ ಮಧ್ಯಕೋಣೇ
ವೀಥೀತ್ರ ಯಮಧೋನಯೇತ್ ।
ತಿರ್ಯಗ್ವೀಥೀತ್ರಯಂ ಚಾಪಿ
ನವ ಕೊಣಾನ್ ಪ್ರಸಾದಯೇತ್ ।।
ತದಧಸ್ತ್ರ್ಯ೦ಶವತ್ಕೋಣಂ
ತದಧಸ್ತಾದ್ಬೃಹತ್ತಥಾ ।
ಸೋಪಾನಮೇಕಂ ತದಧಸ್ತ-
ಥೋಪರ್ಯೇಕ ಕೋಣಕಮ್ ।।
ತ್ರ್ಯ೦ಶಂ ತದೂರ್ಧ್ವಂ ಶೃಂಗಂ
ಚ ಚತುರಸ್ತ್ರಂ ಲಿಖೇತ್ತತಃ ।
ಊರ್ಧ್ವದ್ವಿತೀಯ ಕೋಣಾದ್ಯ-
ಭಾಗಮಾರಾಭ್ಯ ವೈ ಲಿಖೇತ್ ।।
ಏಕೈಕಮಕ್ಷರಂ ತತ್ರ
ದ್ವಿತೀಯೋsಪಿ ಚತುರ್ಥತಃ ।
ಷಷ್ಟೋಷ್ಟಮೇನ ದಶಮೋ
ದ್ವಾದಶೇನ ಚತುರ್ದಶಃ ।।
ಷೋಡಶೇನ ಚ ವಿಂಶೇನ
ತಥಾಷ್ಟದಶ ಏಕತಾನ್ ।
ದ್ವಾವಿಂಶಸ್ತು ಚತುರ್ವಿಂಶಾ-
ದೇಕತ್ವಂ ಭಜತೇ ಯಥಾ ।।
ವರ್ಣಮೇಕಂ ತು ಸೋಪಾನೇ
ಮಧ್ಯವೀಥೀ ಷಡಕ್ಷರೈ: ।
ಉಪೇತಂ ವರ್ಣಮೇಕಂ ಚ
ಶೃಂಗೇ ತತ್ರಾಂತಿಮಂ ಲಿಖೇತ್ ।
ಶ್ರೀ ವೃಂದಾವನಬಂಧೋsಯ-
ಮುದ್ಧೃತೋsನುಷ್ಪಭಾ ಜಯೇತ್ ।।
ಖಿನ್ನವಿನ್ನಃ ಜಪದ್ವೀಪ
ಪೂತವಾತಮತಸ್ಥಿತಃ ।
ಶ್ರೀ ಬ್ರಹ್ಮಣ್ಯವ್ರತಗಣ್ಯೋs-
ಗಯೋಗವ್ರತ ತಪನ್ನವ ।।
****
explanation by sri ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
" ಹೇ ಖಿನ್ನವಿನ್ನಃ "
ದುಃಖಿತರಾದವರಿಂದ ಅಥವಾ ರೋಗ ಪೀಡಿತರಾದವರಿಂದ ಅಥವಾ ಸಂಸಾರ ಖೇದವನ್ನೂ ಹೊಂದಿರುವವರಿಂದ ತದ್ದುಃಖ ನಿವಾರಣೆಗೋಸ್ಕರ ಆಶ್ರಿತರಾದವರೇ ಅಥವಾ ಖೇದ ನಾಶಕರೆಂದು ವಿಚಾರಿತರಾದವರೇ...
" ಜಪದ್ವೀಪ "
ಜಪ ಮಾಡತಕ್ಕ ತಪಸ್ವಿಗಳಲ್ಲಿ ಶ್ರೇಷ್ಠರಾದವರೇ ಅಥವಾ ತಮ್ಮನ್ನು ಕುರಿತು ಜಪವನ್ನು ಆಚರಿಸುವವರಿಗೆ ಜ್ಞಾನ ಕೀರ್ತ್ಯಾದಿ ಪ್ರಕಾಶಕರೇ ಅಥವಾ ತಮ್ಮನ್ನು ಕೃತು ಜಪ ಮಾಡತಕ್ಕವರಿಗೆ ತಮ್ಮ ಸ್ವರೂಪವನ್ನು ತೋರಿಸತಕ್ಕವರೇ...
" ಪೂತವಾತಮತಸ್ಥಿತಃ "
ಪರಮ ಪವಿತ್ರವಾದ ಶ್ರೀ ಮುಖ್ಯಪ್ರಾಣಾವ ಭೂತರಾದ ಶ್ರೀಮನ್ಮಧ್ವಾಚಾರ್ಯರ ಮತದಲ್ಲಿ ಸಂಸ್ಥಿತರಾದವರೇ...
" ಶ್ರೀ ಬ್ರಹ್ಮಣ್ಯ ವ್ರತಗಣ್ಯ "
ಶ್ರೀದೇವಿ ಸಹಿತನಾದ ವಿಷ್ಣ್ವಾಖ್ಯ ಪರಬ್ರಹ್ಮನಿಗೆ ಪ್ರೀತಿಕರವಾದ ಏಕಾದಶ್ಯುಪವಾಸ - ಹರಿ ಸರ್ವೋತ್ತಮತ್ತ್ವ ಸಾಧನಾದಿ ವ್ರತಗಳಿಂದ ತಾವು ಗಣನೀಯರೂ ಅಥವಾ ತಾದೃಶ ವ್ರತಾಚರಣೆಗಳಲ್ಲಿ ತಾವು ಅಗ್ರಗಣ್ಯರು...
" ಅಗಯೋಗವೃತ "
ಅಚಲವಾದ ಧ್ಯಾನಯೋಗವೆಂಬ ವ್ರತವನ್ನು ಕೈಕೊಂಡವರೇ ಅಥವಾ " ಅ " ಕಾರ ವಾಚ್ಯನಾದ ಪರಮಾತ್ಮ ಸಂಬಂಧಿ ಯೋಗವೇ ವ್ರತವಾಗುಳ್ಳವರೇ....
" ತಪನ್ "
ತಪಸ್ಸನ್ನು ಮಾಡುವವರಾಗಿ ಅಥವಾ ಶತ್ರುಗಳನ್ನು ಪರಿತಪಿಸುವವರಾಗಿ ಅಥವಾ ವಾದಿಗಳನ್ನು ವಾದದಿಂದ ಜಯಸುವವರಾಗಿ ಅಥವಾ ಭಕ್ತರ ಪಾಪಗಳನ್ನು ನಾಶ ಪಡಿಸುವವರಾಗಿ....
" ಅವ " = ರಕ್ಷಿಸಿರಿ.
" ತಪನ್ನಿತಿ ವಿಶೇಷಣಾತ್ ಸೂರ್ಯಾಂಶ
ಸಂಭೂತತ್ತ್ವಂ ಧ್ವನ್ಯತೇ "
ಈ ಶ್ಲೋಕದಲ್ಲಿ " ತಪನ್ " ಯೆಂಬ ವಿಶೇಷಣದಿಂದ ಶ್ರೀ ಬ್ರಹ್ಮಣ್ಯತೀರ್ಥರು ಸೂರ್ಯಾಂಶ ಸಂಭೂತರೆಂದು ಧ್ವನಿತವಾಗುತ್ತದೆ.
ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ನ್ಯಾಯಾಮೃತ " ದಲ್ಲಿ....
ಸಮುತ್ಸಾರ್ಯತಮ:ಸ್ತೋಮಂ
ಸನ್ಮಾರ್ಗ ಸಂಪ್ರಕಾಶ್ಯಚ ।
ಸದಾ ವಿಷ್ಣುಪದಾಸಕ್ತಂ
ಸೇವೇ ಬ್ರಹ್ಮಣ್ಯಭಾಸ್ಕರಮ್ ।।
****