Showing posts with label ಕೊಳಲೇನು ಪುಣ್ಯವ ಮಾಡಿ ಕೃಷ್ಣನ jagannatha vittala. Show all posts
Showing posts with label ಕೊಳಲೇನು ಪುಣ್ಯವ ಮಾಡಿ ಕೃಷ್ಣನ jagannatha vittala. Show all posts

Saturday, 14 December 2019

ಕೊಳಲೇನು ಪುಣ್ಯವ ಮಾಡಿ ಕೃಷ್ಣನ ankita jagannatha vittala

ಜಗನ್ನಾಥದಾಸರು
ಕೊಳಲೇನು ಪುಣ್ಯವ ಮಾಡಿ ಕೃಷ್ಣನ ಕರವನೈದಿತೆ ಪ

ಬಹಳುಗ್ರತಪವ ಮಾಡದೆ ಇಂಥÀ ಭೋಗವಾದೀತೇ ಅ.ಪ.

ಧರಿಸಲ್ಹರಿಯು ಜಗವಮೋಹಿಪ ಶಕುತಿ ಬಂದಿತೇ
ಸ್ಮರನ ಬಾಧೆಯು ಆತನ ನುಡಿಗೆ ಸ್ಮರಗೈದಿತೇ 1

ವಾರಿಜಾಕ್ಷನ ಮುಖರಿಗಿಂಥಾ ಸಾಹಸ ಬಂದಿತೇ
ಶ್ರೀ ರಮೆಯರಿಂಗೆ ಬಲವಾದಸೂಯೆ ದೊರಕಿತೇ 2

ಭುವನಸದನ ಜೀವರಿಗೆ ಪಾದಪವಾಳೀತೇ
ಜಗನ್ನಾಥವಿಠಲನ ಮುಖರಿಗೆ ಶಬ್ದವಿಲ್ಲ ಧೋಯಿತೇ 3
********