ನೆರೆನಂಬಿ ಪಡೆಯಿರೋ – ಸ್ಥಿರವಾದ ಕರುಣವ
ಗುರುರಾಘವೇಂದ್ರರಾಯರ ಚಾರುಚರಣವ || ಪ ||
ವರದಂಷ್ಟ್ರಜಲಸುತ್ಸರಿತ ತೀರದಿ ನಿಂದು
ಶರಣರ ದುರಿತವ ತರಿದು ಕಾಯ್ವನೆಂದು || ೧ ||
ಕರವ ಮುಗಿದು ಬಂದ ಪರಮ ಪಾಮರರಾ
ಪೊರೆವ ಕರುಣ ಕೃಪಾಕರಯತಿವರರ || ೨ ||
ಶ್ರೀಶಕೇಶವವಿಠ್ಠಲೇಶನ ದೂತ
ರಾಸೆ ಪೂರೈಸುವ ಗುಣನಿಧಿ ಸತತ || ೩ ||
***
ಗುರುರಾಘವೇಂದ್ರರಾಯರ ಚಾರುಚರಣವ || ಪ ||
ವರದಂಷ್ಟ್ರಜಲಸುತ್ಸರಿತ ತೀರದಿ ನಿಂದು
ಶರಣರ ದುರಿತವ ತರಿದು ಕಾಯ್ವನೆಂದು || ೧ ||
ಕರವ ಮುಗಿದು ಬಂದ ಪರಮ ಪಾಮರರಾ
ಪೊರೆವ ಕರುಣ ಕೃಪಾಕರಯತಿವರರ || ೨ ||
ಶ್ರೀಶಕೇಶವವಿಠ್ಠಲೇಶನ ದೂತ
ರಾಸೆ ಪೂರೈಸುವ ಗುಣನಿಧಿ ಸತತ || ೩ ||
***