Showing posts with label ಮಂಗಳಅಂಜನ ಗಿರಿಪತಿಗೆ prasannavenkata. Show all posts
Showing posts with label ಮಂಗಳಅಂಜನ ಗಿರಿಪತಿಗೆ prasannavenkata. Show all posts

Thursday 14 November 2019

ಮಂಗಳಅಂಜನ ಗಿರಿಪತಿಗೆ ankita prasannavenkata

by ಪ್ರಸನ್ನವೆಂಕಟದಾಸರು
ಮಂಗಳ ಅಂಜನ ಗಿರಿಪತಿಗೆಶುಭಮಂಗಳವೆನ್ನಿ ಸಿರಿಪತಿಗೆ ಪ.

ಮಂಗಳ ಬಾಯೊಳು ಮಾತ ಕಚ್ಚಿದಗೆಮಂಗಳ ಅವಯವ ಮುಚ್ಚಿದಗೆಮಂಗಳ ಕೋರೇಲಿ ಪ್ರಿಯಳ ಹಚ್ಚಿದಗೆಮಂಗಳ ನಖದ್ಯಸು ಬಿಚ್ಚಿದಗೆ 1

ಮಂಗಳಡಿಯೊತ್ತಿ ಬಿಂಕವ ಸೆಳೆದಗೆಮಂಗಳ ಭೂಗುರು ಕಳೆದಗೆಮಂಗಳೆಗೋಸುಗ ಖಳರನಳಿದಗೆಮಂಗಳಾಂಗಿಯರಂಬರ ಸೆಳೆದಗೆ 2

ಮಂಗಳಾಂಗಕೆ ಉಡಿಗೆಯನೊಲ್ಲದಗೆಮಂಗಳ ಶೀಲವ ಸೊಲ್ಲಿದಗೆಮಂಗಳ ಪ್ರಸನ್ವೆಂಕಟೇಶ ಬಲ್ಲಿದಗೆಮಂಗಳಮಯ ಕೈವಲ್ಯದಗೆ 3
*******