Showing posts with label ಸುರನಾರಿಯರ ಮಹಿಮೆಪರಿಪರಿ ramesha. Show all posts
Showing posts with label ಸುರನಾರಿಯರ ಮಹಿಮೆಪರಿಪರಿ ramesha. Show all posts

Monday, 18 November 2019

ಸುರನಾರಿಯರ ಮಹಿಮೆಪರಿಪರಿ ankita ramesha

by ಗಲಗಲಿಅವ್ವನವರು
ಸುರನಾರಿಯರ ಮಹಿಮೆಪರಿಪರಿ ಹೊಗಳುತಬಿರುದಿನಕೋಲಹೊಯಿದೇವಕೋಲ ಪ.

ಉಮಾದಿಗಳಿಗೆಲ್ಲಬೊಮ್ಮ ಹ್ಯಾಂಗ ಶಪಿಸಿದಅಮ್ಮಾ ಇದು ಒಂದುಕೌತುಕಕೋಲಅಮ್ಮಾ ಇದುಕೌತುಕ ಹೇಳೆಂದಝಮ್ಮನೆ ದೂತೆ ನುಡಿದಳುಕೋಲ 1

ಭಾರತಿ ದೇಹದಲ್ಲಿ ಸೇರಿದರ್ಹಾಂಗಮ್ಮಪಾರ್ವತಿದೇವಿ ಮೊದಲಾದಕೋಲಪಾರ್ವತಿದೇವಿ ಮೊದಲಾದ ಕೆಲದಿಯರುನಾರಿರುಕ್ಮಿಣಿ ಎನಗ್ಹೇಳಕೋಲ2

ಪಾಂಚಾಲಿದೇವಿ ತಾನು ಪಂಚಪಾಂಡವರ ಕೂಡಿಕೆಂಚಿತಾ ಹ್ಯಾಂಗ ರಮಿಸೋಳುಕೋಲಕೆಂಚಿತಾ ಹ್ಯಾಂಗ ರಮಿಸೋಳುಮಹಿಮೆಯ ಕಿಂಚಿತ್ತಾಗಿ ಎನಗ್ಹೇಳಕೋಲ3

ಇಂದುಮುಖಿಯರ ಜನ ಚಂದಾಗಿ ಹೇಳಮ್ಮಸಂದೇಹಬ್ಯಾಡ ಎನಕೂಡಕೋಲಸಂದೇಹಬ್ಯಾಡ ಎನಕೂಡ ಅದಕೇಳಿಆನಂದವ ಬಡುವೆಅನುಗಾಲಕೋಲ4

ಮತ್ತೆ ರಾಮೇಶನ ಅತ್ಯಂತ ಭಕ್ತಳಉತ್ತಮ ಕಥೆಯ ಎನಗ್ಹೇಳಕೋಲಉತ್ತಮ ಕಥೆಯ ಎನಗ್ಹೇಳ ಹರುಷದಿಬಿತ್ತಿ ಬೆಳೆದೇವಧರೆಮ್ಯಾಲೆಕೋಲ5
********