ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿದೇ ಖೂನ ಸದಾಸದ್ಗುರು ಕೃಪೆ ಜ್ಞಾನ ಛೇದಿಸಲನುಮಾನ ಶೋಧಿಸ್ಯನುದಿನ ಭೇದಿಸಿ ನೋಡಿ ಸದೋದಿತಾತ್ಮಙÁ್ಞನ 1
ಹೇಳಿ ಕುಡುವದಲ್ಲ ಕೇಳಿ ಕೊಂಬುವುದಲ್ಲ ಹೇಳುವ ಮಾತಿನೊಳಿಲ್ಲ ಕೇಳುವ ಕಿವಿಯೊಳಿಲ್ಲ ತಿಳಿವಿನೊಳಿಹ ನಿಜಗುಟ್ಟು ತಿಳಿದವಬಲ್ಲ 2
ಸೋಹ್ಯ ಸೂತ್ರದ ಖೂನ ದೇಹಾತೀತನು ಬಲ್ಲನೆ ಪೂರ್ಣ ಗುಹ್ಯ ಗೊಪ್ಪದ ಧನ ಮಹಾನುಭವದ ಸ್ಥಾನ ಮಹಿಪತಿ ಮನೋನ್ಮನಲೀಯ ನಿಧಾನ 3
***