Showing posts with label ನಂಬು ನರಮೃಗನಾ ಮನುಜಾ gurumahipati. Show all posts
Showing posts with label ನಂಬು ನರಮೃಗನಾ ಮನುಜಾ gurumahipati. Show all posts

Tuesday, 13 April 2021

ನಂಬು ನರಮೃಗನಾ ಮನುಜಾ ankita gurumahipati

 ನಂಬು ನರಮೃಗನಾ l ಮನುಜಾ l

ಅಂಬುಧಿವಾಸ ಶ್ರೀ ದೇವನಾ ll ಪ ll


ಕುಟಿಲ ಶಠಸುರನುಪಟಳ l ಘಟಿಸೆ

ಖಟಮ ನವ್ಯಾಟಪ್ತ ಬಾಯೆನೆ ಶರಣಾ l

ಖಟಾಖಠಾನೆಂದು ವಿಸ್ಫುಟವಾಗಿ l ಸ್ತಂಬ l

ಛಟಛಟಾನೆನೆ ಬ್ರಮ್ಹಾಂಡ l

ಫಟಪಟುವಂತೆ ಯಾರ್ಭಟದಿಂದಲೊಗೆದನಾ ll 1 ll


ಅರಿಯನರದವನ ಕರಳು ಸರಧರಿಸಿ l

ಭರದಿ ಪೊರೆದೆ ಡಂಗುರನಾ ಹರನಾ l

ಗುರುಮಹೀಪತಿ ಪ್ರಭು ಚರಣಚರನೆನಿಸಿದ l

ಸ್ಮರಹರ ಅಜಸುರ ಪರರೊಡೆಯನಾ ll 2 ll

***