Showing posts with label ನಾರಸಿಂಹನೆ ಎನ್ನ ದುರಿತೌಘಗಳನು lakshmikanta. Show all posts
Showing posts with label ನಾರಸಿಂಹನೆ ಎನ್ನ ದುರಿತೌಘಗಳನು lakshmikanta. Show all posts

Sunday, 1 August 2021

ನಾರಸಿಂಹನೆ ಎನ್ನ ದುರಿತೌಘಗಳನು ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ನಾರಸಿಂಹನೆ ಎನ್ನ | ದುರಿತೌಘಗಳನು

ದೂರಕೈದಿಸಿ ಘನ್ನ | ಕರುಣಾವಲೋಕನ

ಬೀರಿ ಭವ ಭಯವನ್ನ | ಬಿಡಿಸಯ್ಯ ಮುನ್ನ ಪ


ಧೀರ ಸುಜನೋದ್ಧಾರ ದೈತ್ಯ ವಿ

ದೂರ ಘನಗಂಭೀರ ಶೌರ್ಯೋ

ಧಾರ ತ್ರಿಜಗಾಧಾರ ಎನ್ನಯ

ಭಾರ ನಿನ್ನದೊ ಹೇ ರಮಾವರ ಅ.ಪ.


ಏನು ಬಲ್ಲೆನೊ ನಾನು | ಸುಜ್ಞಾನ ಮೂರುತಿ

ಮಾನಸಾಬ್ಜದಿ ನೀನು | ನೆಲೆಯಾಗಿ ನಿಂತು

ಏನು ನುಡಿಸಲು ನಾನು | ಅದರಂತೆ ನುಡಿವೆನು

ಜ್ಞಾನದಾತನೆ ಇನ್ನು | ತಪ್ಪೆನ್ನೊಳೇನು

ಸ್ನಾನ ಜಪತಪ ಮೌನ ಮಂತ್ರ

ಧ್ಯಾನಧಾರಣ ದಾನ ಧರ್ಮಗ-

ಳೇನು ಮಾಡುವುದೆಲ್ಲ ನಿನ್ನಾ-

ಧೀನವಲ್ಲವೆ ಶ್ರೀನಿವಾಸನೆ

ದಾನವಾಂತಕ ದೀನರಕ್ಷಕ

ಧ್ಯಾನಿಪರ ಸುರಧೇನುವೆನ್ನುವ

ಮಾನವುಳ್ಳವರೆಂದು ನಂಬಿದೆ

ಸಾನುರಾಗದಿ ಕಾಯೊ ಬಿಡದೆ 1


ತಂದೆತಾಯಿಯು ನೀನೆ | ಗೋವಿಂದ ಎನ್ನಯ

ಬಂಧು ಬಳಗವು ನೀನೆ | ಮು-

ಕುಂದ ಗುರುಸಖ ವಂದ್ಯದೈವವು ನೀನೆ

ಹೊಂದಿರು ವಿದ್ಯೆಯು ಚಂದದೈಸಿರಿ

ನೀನೆ | ಆನಂದ ನೀನೆ

ಹಿಂದೆ ಮುಂದೆಡಬಲದಿ ಒಳಹೊರ-

ಗೊಂದು ಕ್ಷಣವಗಲದಲೆ ತ್ರಿದಶರ

ವೃಂದ ಸಹಿತದಿ ಬಂದು ನೆಲಸಿ

ಬಂದ ಬಂದಘಗಳನು ಹರಿಸಿ

ನಂದವೀಯುತಲಿರಲು ಎನಗಿ-

ನ್ನೆಂದಿಗೂ ಭಯವಿಲ್ಲ ತ್ರಿಕರಣ-

ದಿಂದ ಮಾಡಿದ ಕರ್ಮ ನಿನ್ನರು

ಎಂದು ಅರ್ಪಿಸುವೆನು ನಿರಂತರ 2


ಪ್ರೀಯ ನೀನೆನಗೆಂದು | ಮರೆಹೊಕ್ಕು ಬೇಡುವೆ-

ನಯ್ಯ ಗುಣಗಣಸಿಂಧು | ಮೈಮರೆಸಿ ವಿಷಯದ

ಹುಯ್ಲಿಗಿಕ್ಕದಿರೆಂದು | ಶರಣನ್ನ ಬಿನ್ನಪ

ಜೀಯ ಲಾಲಿಸಿ ಇಂದು | ಕೈಬಿಡದಿರೆಂದು

ತಾಯನಗಲಿದ ತನಯನಂದದಿ

ಬಾಯ ಬಿಡಿಸುವರೇನೊ ಚಿನ್ಮಯ

ನ್ಯಾಯ ಪೇಳುವರ್ಯಾರೊ ನೀನೊ

ಸಾಯಗೊಲುತಿರೆ ಮಾಯಗಾರನೆ

ತೋಯಜಾಸನ ಮುಖ್ಯ ಸುಮನಸ

ಧ್ಯೇಯ ಶ್ರುತಿ ಸ್ಮøತಿ ಗೇಯ ಕವಿಜನ

ಗೇಯ ಚತುರೋಪಾಯ ಭಕ್ತ ನಿ-

ಕಾಯ ಪ್ರಿಯ ಶ್ರೀಕಾಂತ ಜಯ ಜಯ

***