Showing posts with label ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ purandara vittala CHINTE YAATAKO BAYALA BHRAANTI YATAKO. Show all posts
Showing posts with label ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ purandara vittala CHINTE YAATAKO BAYALA BHRAANTI YATAKO. Show all posts

Sunday 7 November 2021

ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ purandara vittala CHINTE YAATAKO BAYALA BHRAANTI YATAKO


csr and psr


ಚಿಂತೆ ಯಾತಕೋ ಬಯಲ
ಭ್ರಾಂತಿ ಯಾತಕೋ ||ಪ||
ಕಂತು ಪಿತನ ದಿವ್ಯ ನಾಮ
ಮಂತ್ರವನ್ನು ಜಪಿಸುವವಗೆ || ಅ.ಪ||

ಕಾಲ ಕಾಲದಲ್ಲಿ ಬಿಡದೆ
ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ
ಹಾಲ ಕೊಟ್ಟು ಸಲಹಿತೆ

ಸಡಗರದ ನಾರಿಯರು
ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ
ಹಿಡಿದು ರಕ್ಷಿಸುವರ್ಯಾರು

ಹೆತ್ತ ತಾಯಿ ಸತ್ತು ಹೋಗಲು
ಕೆಟ್ಟೆನೆಂಬರು ಲೋಕ ಜನರು
ಮತ್ತೆ ಗುಂಗುರಿಗೆ ತಾಯಿ
ಹತ್ತಿರಿದ್ದು ಸಲಹಿತೆ

ಗಟ್ಟಿ ಮಣ್ಣ ಶಿಶುವ ಮಾಡಿ
ಹೊಟ್ಟೆಯೊಳಗೆ ಇರಿಸಲಿಲ್ಲ
ಕೊಟ್ಟ ದೈವಕೊಂಡು ಹೋದರೆ
ಕುಟ್ಟಕೊಂಡು ಅಳುವೆಯೇಕೆ

ಪರದಲ್ಲಿ ಪದವಿಯುಂಟು
ಇಹದಲ್ಲಿ ಸೌಖ್ಯವುಂಟು
ಗುರು ಪುರಂದರವಿಠಲನ್ನ
ಸ್ಮರಣೆಯನ್ನು ಮರೆಯದವಗೆ
***

pallavi

cinte yAtakO bayala bhrAnti yAtakO

anupallavi

kantu pitana divya nAma mantravannu japisuvavage

caraNam 1

kAla kAladalli biDade vELeyaridu kUguvantha kOLi tanna marige moleya hAla koTTu salahide

caraNam 2

saDagarada nAriyaru haDeyuvAga sUlagitti aDaviyoLage heruva mrgava hiDidu rakSisuvar yAru

caraNam 3

hetta tAyi sattu hOgalu keTTenembaru lOka janaru matte gungurige tAyi hattiriddu salahide

caraNam 4

gaTTi maNNa shishuva mADi hoTTeyoLage irisalilla koTTa daivakoNDu hOdhare guTTakonDu aLuve yAke

caraNam 5

paradalli padaviyuNTu ihadalli saukhyavuNTu guru purandara viTTalanna smaraNeyannu mareyadavage
***


ರಾಗ ಪಂತುವರಾಳಿ. ರೂಪಕ ತಾಳ  (raga, taala may differ in audio)
purvi – rupaka

Chinte yatako bayala branti yatako
Kantupitana divyanama mantraviralu japisade||pa||

Elutudaya kaladalli
Veleyaritu kuguvantha
Koli tanna marige moleya
Hala kottu salahite?||1||

Sadagaradali narijanaru
Hadeyuvaga sulagitti
Adaviyolage heruva mrugava
Pididu rakshane malpararu||2||

Hetta tayi satta sisuvu
Matte kettitembaru janaru
Huttina havige gubbige moleya-
Nittu rakshana maduvararu||3||

Gatti mannina sisuva madi
Hotteyolage irisuvamtha
Kotta daiva kondoydare
Kuttikondu aluvudeke||4||

Nambigegivu salavendu
Hambalipudu lokavella
Nambi purandaravithala-
Nemba nama nudida mele||5||
***


P:       chinte yAtako bayala brAnti yAtako

AP:     kantupitana divyanAma mantraviralu japisade

 

C1:     oLLeudaya kAladalli vELeyaritu kooguvanta

          kOLi tanna marige moleya hAla kottu salahite

 

C2:     ihadalliyu keeritiyuntu paradalliyu padaviyuntu

          Gurupurandaravithalana charaNavannu bhajisuvavage
***

Meaning:

P:       why worry, and why get illusioned

AP:     (why worry) even when there is the sacred name of kantupita (father of kAma), and (you) don’t take it.

 

C1:     Did the hen which calls time very early in the morning feed her chiks by feeding her milk from her brests

 

C2:     The one who worships the feet of guru purandaravithala will attain fame in this world and also earn a place in the other world.
***

ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ
ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ||pa||

ಏಳುತುದಯ ಕಾಲದಲ್ಲಿ
ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ
ಹಾಲ ಕೊಟ್ಟು ಸಲಹಿತೆ?||1||

ಸಡಗರದಲಿ ನಾರಿಜನರು
ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ
ಪಿಡಿದು ರಕ್ಷಣೆ ಮಾಳ್ಪರಾರು||2||

ಹೆತ್ತ ತಾಯಿ ಸತ್ತ ಶಿಶುವು
ಮತ್ತೆ ಕೆಟ್ಟಿತೆಂಬರು ಜನರು
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ-
ನಿತ್ತು ರಕ್ಷಣ ಮಾಡುವರಾರು||3||

ಗಟ್ಟಿ ಮಣ್ಣಿನ ಶಿಶುವ ಮಾಡಿ
ಹೊಟ್ಟೆಯೊಳಗೆ ಇರಿಸುವಂಥ
ಕೊಟ್ಟ ದೈವ ಕೊಂಡೊಯ್ದರೆ
ಕುಟ್ಟಿಕೊಂಡು ಅಳುವುದೇಕೆ||4||

ನಂಬಿಗೆಗಿವು ಸಾಲವೆಂದು
ಹಂಬಲಿಪುದು ಲೋಕವೆಲ್ಲ
ನಂಬಿ ಪುರಂದರವಿಠಲ-
ನೆಂಬ ನಾಮ ನುಡಿದ ಮೇಲೆ||5||
*******

ಪುರಂದರದಾಸರು

ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.

ಏಳುತುದಯಕಾಲದಲ್ಲಿ |ವೇಳೆಯರಿತು ಕೂಗುವಂಥ ||ಕೋಳಿ ತನ್ನ ಮರಿಗೆ ಮೊಲೆಯ |ಹಾಲಕೊಟ್ಟು ಸಲಹಿತೆ ? 1

ಸಡಗರದಲಿ ನಾರಿಜನರು |ಹಡೆಯುವಾಗ ಸೂಲಗಿತ್ತಿ ||ಅಡವಿಯೊಳಗೆ ಹೆರುವ ಮೃಗವ |ಪಿಡಿದು ರಕ್ಷಣೆ ಮಾಳ್ಪರಾರು 2

ಹೆತ್ತ ತಾಯಿ ಸತ್ತ ಶಿಶುವು |ಮತ್ತೆ ಕೆಟ್ಟಿತೆಂಬರು ಜನರು ||ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |ನಿತ್ತು ರಕ್ಷಣ ಮಾಡುವರಾರು 3

ಗಟ್ಟಿಮಣ್ಣಿನ ಶಿಶುವ ಮಾಡಿ |ಹೊಟ್ಟೆಯೊಳಗೆ ಇರಿಸುವಂಥ ||ಕೊಟ್ಟ ದೈವ ಕೊಂಡೊಯ್ದರೆ |ಕುಟ್ಟಿಕೊಂಡು ಅಳುವುದೇಕೆ 4

ನಂಬಿಗೆಗಿವು ಸಾಲವೆಂದು |ಹಂಬಲಿಪುದು ಲೋಕವೆಲ್ಲ ||ನಂಬಿ ಪುರಂದರವಿಠಲ - |ನೆಂಬ ನಾಮ ನುಡಿದ ಮೇಲೆ 5
******