..
kruti by Nidaguruki Jeevubai
ಬಾರೋ ಮನ ಮೋಹನ
ಭಾಮೆ ರುಕ್ಮಿಣಿ ಸತ್ಯಭಾಮೆಯರಸ ಬೇಗ ಪ
ಯಮುನಾ ತೀರದಿ ಮುರಳಿಯ ನುಡಿಸಲು
ಪ್ರಮದೇರು ಗೋವ್ಗಳು ಮರುಳಾಗಿರಲು
ಮಮತೇಲಿ ಸಲಹಿದ ಚಲುವ ಕೃಷ್ಣನೆ ಬೇಗ 1
ಗೋಪಿಯ ಕಂದ ಶ್ರೀ ಗೋಪಾಲನೆ
ಗೋವರ್ಧನೋದ್ಧಾರಿ ಶ್ರೀ ಕೃಷ್ಣನೆ
ಗೋಪಿಕಾಲೋಲ ಶ್ರೀ ಗೋಪಾಲ ಕೃಷ್ಣ ಬೇಗ 2
ಕಮಲ ಸಂಭವನಯ್ಯ ಕಮಲಾಪತೆ
ಕಮಲಜಾತೆಯ ಪ್ರಿಯ ಪೊರೆ ಶ್ರೀಪತೆ
ಕಮಲ ಪತ್ರಾಕ್ಷ ಶ್ರೀ ಕಮಲನಾಭ ವಿಠ್ಠಲ 3
***