Showing posts with label ಇಂದ್ರಸೇನ ನಾಥ ಹೋ ತ್ರೈಲೋಕ್ಯ pranesha vittala. Show all posts
Showing posts with label ಇಂದ್ರಸೇನ ನಾಥ ಹೋ ತ್ರೈಲೋಕ್ಯ pranesha vittala. Show all posts

Friday, 8 November 2019

ಇಂದ್ರಸೇನ ನಾಥ ಹೋ ತ್ರೈಲೋಕ್ಯ ankita pranesha vittala

by ಪ್ರಾಣೇಶದಾಸರು
ಇಂದ್ರಸೇನ ನಾಥ ಹೋ, ತ್ರೈಲೋಕ್ಯ ವಿಖ್ಯಾತ ಹೋ |
ಸವ್ಯಸಾಚಿ ಪ್ರೀತ ಹೋಮಧ್ಯಗೇಹಜಾತ ಹೋ ಪ

ತರಣಿಬಿಂಬಕೆ ಜಿಗಿದೆ ಗದೆಯನು ವಗೆದೆಅಸುರಗ ಕರವನು ಮುಗಿದೆ |
ಹರಿಗೆ ವಾರ್ತೆಯ ತಂದೆ ಜರಿಜನ ಕೊಂದೆನೀಂ ಬದರಿಯೊಳ್ನಿಂದೆ ಖಳಕುಲ |
ತರಿದೆ,ವಜ್ರಶರೀರ, ಧರಣಿಯಭಾರವಿಳುಹಿದುದಾರಮತಿ, ಕಪಿ |
ವರನೊಳತಿ ಕೃಪೆ ಮಾಡಿದೆ ದಾನವ |
ಬೇಡಿದೆ ಸುಮತಿಯ ನೀಡಿದೆ 1
ದಂಡ ಮೇಖಲ ಧಾರ ಕುಜನಕುಠಾರ|
ಬ್ರಹ್ಮ ಶರೀರ ಜೈಸಿದೆಮಂಡೋದರಿ ವಲ್ಲಭನ ಚರಿಸಿದೆಯೋವನ|
ತಂದೆ ಮಾಧವನ ಉಡುಪಿಲಿಚಂಡವಿಕ್ರಮರಾಮ ಸೇವಕ ಭೀಮ |ಸದಾಚಾರಧಾಮಯತಿ ಮೇ |
ಷಾಂಡನ ಮೊರೆ ಕೇಳ್ದೆ ಕೀಚಕನನು ಸೀಳ್ದೆ ದ್ವಿಜಕುಲವಾಳ್ದೆ 2

ಲಕುಮಿಗುಂಗುರವ ಕೊಟ್ಟಿ ರಣಕತಿ ಗಟ್ಟಿಶಾಟಿಯನುಟ್ಟಿ ಶರಧಿಯ ತ |
ವಕದಿ ಕ್ಷಣದೊಳು ಹಾರಿದೆ ಉಗ್ರವ ತೋರಿದೆಜ್ಞಾನವ ಬೀರಿದೆ ಲಂಕೆಯ |ಸಕಲ ಸೌಖ್ಯವ ಕೆಡಿಸಿ ಪುಷ್ಪವ ಮುಡಿಸಿಐಕ್ಯವ ಬಿಡಿಸಿ, ವಟುವಪು |ಮುಕುತಿಪತಿಪ್ರಾಣೇಶ ವಿಠಲನದಾಸ ಸಲಹೋ ನಿರ್ದೋಷ3
*******