raga kamavardhini tala adi
by helavana katte giriyammaನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ
ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ ।।ಪ।।
ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ
ಪೊರೆದ ಮಹಾನುಭಾವ ಮುರಹರನೆ ನಿನ್ನ ।।೧।।
ಶಕ್ತನೆ ನಿನ್ನನಾ ಭಕ್ತಿಯಿಂ ಭಜಿಸುವೆ
ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ ।।೨।।
ಧರೆಯೊಳು ರಾಜಿಪ ವರಹೆಳವನಕಟ್ಟೆ
ಗಿರಿಯೊಳು ನೆಲಸಿಹ ಪರಮಪುರುಷ ರಂಗ ।।೩।।
***
ರಾಗ : ಶಂಕರಾಭರಣ ತಾಳ : ಆದಿ (raga tala may differ in audio)
ನಂಬಿದೆ ನಂಬಿದೆ ಅಂಬುಜಾಕ್ಷ ನಿನ್ನಾ
ನಂಬಿದ ನಂಬಿದೆ ನಂಬಿದೆನಯ್ಯಾ ।। PA ।।
ಮೊರೆಯಿಡೆ ದ್ರೌಪದಿ | ತ್ವರಿತದಿ ಪೋಗುತ |
ಪೊರೆದ ಮಹಾನುಭಾವ | ಮುರಹರ ನಿನ್ನ ।। 1 ।।
ಶಕ್ತನೆ ನಿನ್ನಯ | ಭಕ್ತಿಯಿಂ ಭಜಿಸುವೆ
ಭಕ್ತರಿಗೆಲ್ಲಾ ನೀನು | ಮುಕ್ತಿ ಕೊಡುವೆ ಎಂದು ।। 2 ।।
ಧರೆಯೊಳು ರಾಜಿಪ | ವರ ಹೆಳವನಕಟ್ಟೆ
ಗಿರಿಯೊಳು ನೆಲಸಿಹ | ಪರಮಪುರುಷ ರಂಗಾ ।। 3 ।।
***
Nambide nambide ambujākṣa ninnā nambida nambide nambidenayyā।। PA।।
moreyiḍe draupadi | tvaritadi pōguta | poreda mahānubhāva | murahara ninna।। 1।।
śaktane ninnaya | bhaktiyiṁ bhajisuve bhaktarigellā nīnu | mukti koḍuve endu।। 2।।
dhareyoḷu rājipa | vara heḷavanakaṭṭe giriyoḷu nelasiha | paramapuruṣa raṅgā ।। 3।।
Plain English
Nambide nambide ambujaksa ninna nambida nambide nambidenayya।। PA।।
moreyide draupadi | tvaritadi poguta | poreda mahanubhava | murahara ninna।। 1।।
saktane ninnaya | bhaktiyim bhajisuve bhaktarigella ninu | mukti koduve endu।। 2।।
dhareyolu rajipa | vara helavanakatte giriyolu nelasiha | paramapurusa ranga ।। 3।।
***
ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ
ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ ಪ.
ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ
ಪೊರೆದ ಮಹಾನುಭಾವ ಮುರಹರನೆ ನಿನ್ನ 1
ಶಕ್ತನೆ ನಿನ್ನ ನಾ ಭಕ್ತಿಯಿಂ ಭಜಿಸುವೆ
ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ 2
ಧರೆಯೊಳು ರಾಜಿಪ ವರ ಹೆಳವನಕಟ್ಟೆ
ಗಿರಿಯೊಳು ನೆಲಸಿಹ ಪರಮಪುರುಷ ರಂಗ 3
***