Showing posts with label ಆಲದೆಲೆಯ ಮ್ಯಾಲೆ ಮಲಗ್ಯುಂಗುಟ mahipati. Show all posts
Showing posts with label ಆಲದೆಲೆಯ ಮ್ಯಾಲೆ ಮಲಗ್ಯುಂಗುಟ mahipati. Show all posts

Wednesday, 11 December 2019

ಆಲದೆಲೆಯ ಮ್ಯಾಲೆ ಮಲಗ್ಯುಂಗುಟ ankita mahipati

ಕೃತಿ ಕಾಖಂಡಕಿ ಕೃಷ್ಣದಾಸರು

check kruti by ಕಾಖಂಡಕಿ ಶ್ರೀ ಮಹಿಪತಿರಾಯರು ?

ಬಸಂತ್ ರಾಗ ದಾದರಾ ತಾಳ

ಆಲದೆಲೆಯ ಮ್ಯಾಲೆ ಮಲಗ್ಯುಂಗುಟ ಚಪ್ಪರಿಪನು ನೀನಾರೈ
ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈ ||ಧ್ರುವ||

ಚೆಲುವ ಕಂಗಳ ನೋಟದಲ್ಹೊಳೆಯುತ ಜಲದೊಳಗಾಡುವನಾರೈ
ಕಾಲುಡುಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನೀನಾರೈ ||೧||

ಕೋರ್ಹಲ್ಲಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ
ನರಮೃಗರೂಪದಿ ತರಳಗೊಲಿದು ಭರದಲಿ ಬಂದವನಾರೈ ||೨||

ಒಪ್ಪಿಲಿ ಮೂರು ಪಾದವ ಭೂಮಿಯೊಪ್ಪಿಸಿಕೊಂಡವನಾರೈ
ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ ||೩||

ಬಳ್ಳಿ ಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ
ಗೊಲ್ಲತಿಯರ ಮೋಹಿಸಿ ಎಳೆದಾಡುವ ಚೆಲುವನು ನೀನಾರೈ ||೪||

ಒದಗಿ ತ್ರಿಪುರದಲಿ ಹಳಿದು ನಾರೇರ ವ್ರತ ಚದುರನು ನೀನಾರೈ
ಕುದುರೆಯನೇರಿ ಹದನದಿ ತಿರವ್ಯಾಡುತ ರಾವುತ ನೀನಾರೈ ||೫||

ಕುರುಹುದೋರದೆ ನರನಾರಿಯರ ರೂಪದಲ್ಯಾಡಿದವನಾರೈ
ಮರುಳ ಮಾಡ್ಯಸುರರ ಸುರರಿಗೆ ಅಮೃತವ ಬಡಿಸಿದವ ನೀನಾರೈ ||೬||

ಅಗಣಿತಗುಣದಲಿ ಬಗೆಬಗೆ ಆಡುವ ಸುಗುಣ ನೀನಾರೈ
ಝಗಝಗಿಸುವ ಜಗನ್ಮನೋಹರನಾಗ್ಯಾಡುವ ನೀನಾರೈ ||೭||

ಖೂನ ಕುರುಹದೋರಿದ ಭಾನುಕೋಟಿ ತೇಜನಹುದೊ ಬಾರೈ
ದೀನ ಮಹಿಪತಿ ಸನಾಥ ಮಾಡಿದ ದೀನೋದ್ಧಾರಹುದಹುದೈ ||೮|
***

 ಕಾಖಂಡಕಿ ಶ್ರೀ ಕೃಷ್ಣದಾಸರು

ಆಲದೆಲಿಯ ಮ್ಯಾಲ ಮಲಗ್ಯುಂಗುಟ ಚಪ್ಪರಿವನು ನೀನಾರೈ ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈಧ್ರುವ ಚಲುವ ಕಂಗಳ ನೋಡದಲ್ಹೊಳವುತ ಜಲದೊಳಗಾಡುವನಾರೈ ಕಾಲುಡಿಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನಿನಾರೈ 1 
ಕೋರ್ಹಲ್ಲಿಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ ನರಮೃಗರೂಪದಿ ತರಳಗೊಳಿದು ಭರದಲಿ ಬಂದವನಾರೈ 2 
ಒಪ್ಪಿಲಿ ಮೂರುಪಾದ ಭೂಮಿಯೊಪ್ಪಿಸಿಕೊಂಡವನಾರೈ ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ 3 
ಬಳ್ಳಿಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ ಗೊಲ್ಲತೆಯರ ಮೋಹಿನಿ ಎಳಿದಾಡುವ ಚಲುವನು ನೀನಾರೈ 4
 ಚದುರನು ನೀನಾರೈ ಕುದುರೆಯನೇರಿ ಹದನದಿ ತಿರವ್ಯಾಡುವ ರಾವುತನಾರೈ 5
 ಕುರುಹುದೋರದೆ ನರನಾರಿಯರ ರೂಪದಲ್ಯಾಡಿದವನಾರೈ ಬಡಿಸಿದವ ನೀನಾರೈ 6 
ಅಗಣಿತ ಗುಣದಲಿ ಬಗೆ ಬಗೆ ಅಡುವ ಸುಗುಣ ನೀನಾರೆ ೈ ಝಗಝಗಿಸುವ ಜಗನ್ಮನೋಹರನಾಗ್ಯಾಡುವ ನೀನಾರೈ 7 
ಖೂನ ಕುರುಹದೋರಿದ ಭಾನುಕೋಟಿ ತೇಜನಹುದೋ ಬಾರೈ ದೀನ ಮಹಿಪತಿ ಸನಾಥಮಾಡಿದ ದೀನೋದ್ಧಾರಹುದಹುದೈ 8
****