ಕಾಖಂಡಕಿ ಶ್ರೀ ಮಹಿಪತಿರಾಯರು
ಪೂಜಿಮಾಡುವ ಬನ್ನಿ ರಾಜತೇಜೋನಿಧಿಯ ರಾಜಾಧಿರಾಜ ಮಹಾರಾಜ ಗುರುಮೂರ್ತಿಯ ಪ
ಮನವೆ ಸುಮನಮಾಡಿ ಘನಗುರು ಪಾದÀಲಿಡಿ ಅನುಭವದಿಂದ ನೋಡಿ ಅನುದಿನವೆ ಕೊಂಡಾಡಿ 1
ಷೋಡಶೋಪಚಾರ ಮಾಡಿ ದೃಢ ವಿಚಾರ ನೋಡಿ ಮನೋಹರ ಒಡಿಯನೆ ಸಹಕಾರ 2
ಕಣ್ಣಿನೊಳಿಟ್ಟು ಖೂನ ಪುಣ್ಯನೋಡಿ ನಿಧಾನ ಚಿಣ್ಣಮಹಿಪತಿಪ್ರಾಣ ಧನ್ಯಗೈಸುವ ಸಾಧನ 3
***