Showing posts with label ಯಾರೂ ಸಂಗಡ ಬಾಹೋರಿಲ್ಲ ನಾರಾಯಣ purandara vittala YAARU SANGADA BAAHORILLA NARAYANA. Show all posts
Showing posts with label ಯಾರೂ ಸಂಗಡ ಬಾಹೋರಿಲ್ಲ ನಾರಾಯಣ purandara vittala YAARU SANGADA BAAHORILLA NARAYANA. Show all posts

Friday 24 September 2021

ಯಾರೂ ಸಂಗಡ ಬಾಹೋರಿಲ್ಲ ನಾರಾಯಣ purandara vittala YAARU SANGADA BAAHORILLA NARAYANA



ರಾಗ ರೇಗುಪ್ತಿ ಅಟತಾಳ (raga, taala may differ in audio)

ಯಾರೂ ಸಂಗಡ ಬಾಹೋರಿಲ್ಲ
ನಾರಾಯಣನ ನಾಮ ನೆರೆಬಾಹೋದಲ್ಲದೆ ||

ಹೊತ್ತು ನವಮಾಸ ಪರ್ಯಂತವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥಾ ತಾಯಿ
ಅತ್ತು ಕಳಹುವಳಲ್ಲದೆ ನೆರೆ ಬಹಳೆ ||

ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ
ಭಾವಶುದ್ಧದಿ ಧಾರೆಯೆರೆಸಿಕೊಂಡ
ದೇವಿ ತನ್ಸತಿ ತಲೆಗೆ ಕೈಯಿಟ್ಟುಕೊಂಡು ಇ-
ನ್ನಾವ ಗತಿಯೋ ಎಂದು ಅಳುತುಳಿವಳಲ್ಲದೆ ||

ಮತ್ತೆ ಪ್ರಾಣರು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ದು ಹಾಕೆಂಬರು
ಎತ್ತಿದ ಕಸಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರು ಫಲವಿಲ್ಲ ಪ್ರಾಣಿ ||

ಪುತ್ರಮಿತ್ರರು ಸಕಲಬಂಧುಗಳು ಸತಿಯರು
ಹತ್ತಿರದೊಳ್ ನಿಂತು ನೋಡುವರಲ್ಲದೆ
ಮೃತ್ಯುದೇವಿಯು ಬಂದು ಪ್ರಾಣವನು ಸೆಳೆವಾಗ
ಜಾತ್ರೆ ಜನರಷ್ಟಿದ್ದು ಏನು ಮಾಡುವರು ||

ಯಮನ ದೂತರು ಬಂದು ಪಾಶವನು ತಗಲ್ಹಾಕಿ
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||
*********

ಯಾರೂ ಸಂಗಡ ಬಾಹೋರಿಲ್ಲ ನಾರಾಯಣ ನಿಮ್ಮ ನಾಮವೊಂದಲ್ಲದೆ ಪ.

ಹೊತ್ತು ನವಮಾಸ ಪರಿಯಂತರವು ಗರ್ಭದಲಿಹೆತ್ತು ಬಲು ನೋವು ಬೇನೆಗಳಿಂದಲಿತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿಅತ್ತು ಕಳುಹುವಳಲ್ಲದೆ ನೆರೆಬಾಹಳೆ 1

ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನಭಾವಶುದ್ಧಿಯಲಿ ಧಾರೆಯೆರಿಸಿಕೊಂಡದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇನ್ನಾವ ಗತಿಯೆಂದೆನುತ ಗೋಳಿಡುವಳಲ್ಲದೆ 2

ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗಎತ್ತಿವನ ಹೊರಗೊಯ್ಧ ಹಾಕೆಂಬರುಎತ್ತಿದ ಕಸಕಿಂತ ಕಡೆಯಾಯಿತೀ ದೇಹವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ 3

ಪುತ್ರಮಿತ್ರರು ಸಕಲ ಬಂಧು ಬಳಗಗಳೆಲ್ಲಹತ್ತಿರ ನಿಂತು ನೋಡುವರಲ್ಲದೆಮೃತ್ಯುದೇವಿಯ ಬಂದು ಅಸುಗಳನು ಸೆಳೆವಾಗಮತ್ತೆ ತನ್ನವರಿದ್ದು ಏನು ಮಾಡುವರು 4

ಯಮನ ದೂತರು ಬಂದು ಪಾಶಂಗಳನೆ ಎಸೆದುಮಮತೆಯಿಲ್ಲದೆ ಪ್ರಾಣ ಎಳೆಯುತಿರಲುವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗಕಮಲಾಕ್ಷ ಪುರಂದರವಿಠಲ ನೀನಲ್ಲದೆ 5
********