Showing posts with label ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗಿದು purandara vittala SATYAVANTARIGIDU KAALAVALLA DUSHTA JANARIGIDU. Show all posts
Showing posts with label ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗಿದು purandara vittala SATYAVANTARIGIDU KAALAVALLA DUSHTA JANARIGIDU. Show all posts

Saturday, 4 December 2021

ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗಿದು purandara vittala SATYAVANTARIGIDU KAALAVALLA DUSHTA JANARIGIDU




ಸತ್ಯವಂತರಿಗಿದು ಕಾಲವಲ್ಲ ||
ದುಷ್ಟ ಜನರಿಗಿದು ಸುಭೀಕ್ಷ ಕಾಲ ||ಪ||

ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ |
ಪರಮ ಪಾಪಿಗಳಿಗೆ ಸುಭೀಕ್ಷ ಕಾಲ ||
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ |
ಧರೆಗೆ ಜಾರೆಗಳ ಕೊಂಡಾಡುವ ಕಾಲ ||೧||

ಉಪಕಾರ ಮಾಡಿದರೆ ಅಪಕರಿಸುವ ಕಾಲ |
ಸಕಲವೂ ತಿಳಿದವಗೆ ದುರ್ಭೀಕ್ಷ ಕಾಲ ||
ಪತಿಸುತರು ಎಂಬುವರ ನಂಬಲರಿಯದ ಕಾಲ |
ಸಟೆಯಲ್ಲವಿದೆ ವಿಪರೀತ ಕಾಲ ||೨||

ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ |
ಕರ್ಮಿ ಪಾತಕರಿಗೆ ಬಹು ಸೌಖ್ಯ ಕಾಲ ||
ನಿರ್ಮಲಾತ್ಮಕ ಸಿರಿ ಪುರಂದರ ವಿಠಲನ |
ಮರ್ಮದೊಳು ಭಜಿಪಲರಿಯದ ಕಾಲವಯ್ಯ ||೩||
***

ರಾಗ ಮುಖಾರಿ ಝಂಪೆತಾಳ (raga tala may differ in audio) 

Satyavantharigidu kaala illa
Dushtajanarige Subhikshakaala||

Harismarane Maaduvage Kshayavaguva Kaala
Parama Paapigalige Subhikshakaala
Sthiravaada Pativrateya Pararu Nindipa Kaala
Dharege Jaareyala Kondaaduva Kaala||1||

Upakaara Maadidare Apakarisuva Kaala
Sakalavu Tilidavage Durbhiksha Kaala
Patisutaru Embavara Nambalariyada Kaala
Sateyallavide Vipareeta Kaala||2||

Dharma Maaduvage Nirmulavaaguva Kaala
Karmeepaatakarige Bahu Saukhya Kaala
Nirmalatmaka Siripurandara Vittalana
Marmadolu Bhajisalariyada Kaalavayya||3||
***

pallavi

satyavantarigidu kAlavalla

anupallavi

duSTa janarige subhikSa kAla

caraNam 1

hari smaraNe mADuvage kSayavAguva kAla parama pApigaLige subhikSa kAla
sthiravAda pativrateya pararu nindipa kAla dharage jAreyaLa koNDADuva kAla

caraNam 2

upakAra mADidare apakarisuva kAla sakalavu tiLidavage durbhikSa kAla
patisutaru embavaru nambalariyada kAla saDeyallavide viparIta kAla

caraNam 3

dharmava mADuvage nirmUlavAguva kAla karmi pAtakarige bahu saukhya kAla
nirmalAtmaka siri purandara viTTalana marmadoLu bhajisalariyada kAlavayya
***

satyavaMtarigidu kAlavalla ||
duShTa janarigidu suBIkSha kAla ||pa||
 
harismaraNe mADuvage kShayavAguva kAla |
parama pApigaLige suBIkSha kAla ||
sthiravAda pativrateya pararu niMdipa kAla |
dharege jAregaLa koMDADuva kAla ||1||

upakAra mADidare apakarisuva kAla |
sakalavU tiLidavage durBIkSha kAla ||
patisutaru eMbuvara naMbalariyada kAla |
saTeyallavide viparIta kAla ||2||
 
dharma mADuvage nirmUlavAguva kAla |
karmi pAtakarige bahu sauKya kAla ||
nirmalAtmaka siri puraMdara viThalana |
marmadoLu Bajipalariyada kAlavayya ||3||
***

ಸತ್ಯವಂತರಿಗಿದು ಕಾಲವಲ್ಲ ||ಪ||
ದುಷ್ಟಜನರಿಗೆ ಸುಭಿಕ್ಷಕಾಲ ||

ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಪರಮಪಾಪಿಗಳಿಗೆ ಸುಭಿಕ್ಷಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಧರೆಗೆ ಜಾರೆಯಳ ಕೊಂಡಾಡುವ ಕಾಲ ||

ಉಪಕಾರಮಾಡಿದರೆ ಅಪಕರಿಸುವ ಕಾಲ
ಸಕಲವು ತಿಳಿದವಗೆ ದುರ್ಭಿಕ್ಷಕಾಲ
ಪತಿಸುತರು ಎಂಬವರ ನಂಬಲರಿಯದ ಕಾಲ
ಸಟೆಯಲ್ಲವಿದೆ ವಿಪರೀತ ಕಾಲ ||

ಧರ್ಮವ ಮಾಡುವಗೆ ನಿರ್ಮೂಲವಾಗುವ ಕಾಲ
ಕರ್ಮಿಪಾತಕರಿಗೆ ಬಹುಸೌಖ್ಯಕಾಲ
ನಿರ್ಮಲಾತ್ಮಕ ಸಿರಿಪುರಂದರವಿಠಲನ
ಮರ್ಮದೊಳು ಭಜಿಸಲರಿಯದ ಕಾಲವಯ್ಯ ||
*********

ಸತ್ಯವಂತರಿಗಿದು ಕಾಲವಲ್ಲ ||ಪ||
ದುಷ್ಟಜನರಿಗೆ ಸುಭಿಕ್ಷಕಾಲ ||

ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಪರಮಪಾಪಿಗಳಿಗೆ ಸುಭಿಕ್ಷಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ
ಧರೆಗೆ ಜಾರೆಯಳ ಕೊಂಡಾಡುವ ಕಾಲ ||

ಉಪಕಾರಮಾಡಿದರೆ ಅಪಕರಿಸುವ ಕಾಲ
ಸಕಲವು ತಿಳಿದವಗೆ ದುರ್ಭಿಕ್ಷಕಾಲ
ಪತಿಸುತರು ಎಂಬವರ ನಂಬಲರಿಯದ ಕಾಲ
ಸಟೆಯಲ್ಲವಿದೆ ವಿಪರೀತ ಕಾಲ ||

ಧರ್ಮವ ಮಾಡುವಗೆ ನಿರ್ಮೂಲವಾಗುವ ಕಾಲ
ಕರ್ಮಿಪಾತಕರಿಗೆ ಬಹುಸೌಖ್ಯಕಾಲ
ನಿರ್ಮಲಾತ್ಮಕ ಸಿರಿಪುರಂದರವಿಠಲನ
ಮರ್ಮದೊಳು ಭಜಿಸಲರಿಯದ ಕಾಲವಯ್ಯ ||
*******