Showing posts with label ಇದೇ ಭಕುತಿ ಮತಿಗೆ ಮುಕುತಿ ಇದಕ್ಕಧಿಕವಾಗಿಪ್ಪ ankita vijaya vittala. Show all posts
Showing posts with label ಇದೇ ಭಕುತಿ ಮತಿಗೆ ಮುಕುತಿ ಇದಕ್ಕಧಿಕವಾಗಿಪ್ಪ ankita vijaya vittala. Show all posts

Wednesday, 16 October 2019

ಇದೇ ಭಕುತಿ ಮತಿಗೆ ಮುಕುತಿ ಇದಕ್ಕಧಿಕವಾಗಿಪ್ಪ ankita vijaya vittala

ವಿಜಯದಾಸ
ಇದೇ ಭಕುತಿ ಮತಿಗೆ ಮುಕುತಿ |
ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ಪ

ರತುನ ಗರ್ಭದೊಳಗೆ ತಿಳಿ |
ರತುನ ಸಮಕ್ಷೇತ್ರಗಳಿಗೆ |
ರತುನವೆನ್ನಿ ಯತಿವಂಶ |
ರÀತುನ ಮಧ್ವಮುನಿಮಾಡಿದಾ 1

ಪದ ಜೀವಸ್ತರಿಗದೆ ಪಾ |
ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ |
ಸಾಧನಿ ಮನ ಮಾಡಿರಯ್ಯಾ 2

ಏಳು ಒಂದು ಮಠದ ಲೋಕರಂಸೆ ಸದನವೆನ್ನಿ |
ಪೇಳಲೇನು ಅವರೇ ಯಿಲ್ಲಿ
ಊಳಿಗವ ಮಾಡುತ್ತಿಪ್ಪರು 3

ಮೇರೊ ಪರ್ವತ ತುಲ್ಯವಿದೆ |
ವಾರಿಜನೆ ಮಧ್ವರಾಯ |
ಈ ರಜತ ಪೀಠವೆ ಮಂದಿರ ಶತಕೋಟಿ ಎನ್ನೀ4

ಮೆರೆವ ಮಧ್ವತೀರ್ಥ ಬಾಹಿರ |
ವರಣ ಉದಕವೆನ್ನಿ ಇಲ್ಲಿ |
ಚರಿಸುವಂಥ ಸುಗುಣ ತೃಣಾ
ದ್ಯರು ಮುಕುತಿ ಯೋಗ್ಯರಹುದು5

ಉಡಪಿ ಯಾತ್ರೆ ಮಾಡಿದವನು |
ಪೊಡವಿ ತುಂಬ ಯಾತ್ರೆ |
ಬಿಡದೆ ಚರಿಸಿದವನೆ ಎಂದು |
ಮೃಡನು ಇಲ್ಲಿ ಸಾರುತಿಪ್ಪಾ 6

ಉಬ್ಬಿ ಸರ್ವ ಇಂದ್ರಿಯಂಗಳಾ |
ಹಬ್ಬವಾಗಿ ಸುಖಿಪದಕೆ |
ಊರ್ಬಿಯೊಳಗೆ ಉಡುಪಿ ಯಾತ್ರೆ |
ಅಬ್ಬದಲೆ ದೊರಕದಯ್ಯಾ 7

ಹಿಂಗಿ ಪೋಗದಕೆ ಇದೇ |
ಅಂಗವಲ್ಲದೆ ಬೇರೆ ಇಲ್ಲ |
ರಂಗ ಸುಲಭಸಾಧ್ಯಾವಾಹಾ 8

ನೂರು ಕಲ್ಪಧರ್ಮ
ಮಾರನಯ್ಯ ವಿಜಯವಿಠ್ಠಲನ |
ಸಾರಿ ತಂದು ಕೊಡುವಾ9
*********