Showing posts with label ಕೆಲವರು ಕೆಂದಾವರಿಯ purandara vittala ankita suladi ಕೃಷ್ಣ ಬಾಲಲೀಲಾ ಸುಳಾದಿ KELAVARU KENDAVARIYA KRISHNA BALALEELA SULADI. Show all posts
Showing posts with label ಕೆಲವರು ಕೆಂದಾವರಿಯ purandara vittala ankita suladi ಕೃಷ್ಣ ಬಾಲಲೀಲಾ ಸುಳಾದಿ KELAVARU KENDAVARIYA KRISHNA BALALEELA SULADI. Show all posts

Saturday 4 September 2021

ಕೆಲವರು ಕೆಂದಾವರಿಯ purandara vittala ankita suladi ಕೃಷ್ಣ ಬಾಲಲೀಲಾ ಸುಳಾದಿ KELAVARU KENDAVARIYA KRISHNA BALALEELA SULADI


 Audio by Vidwan Sumukh Moudgalya


.ಶ್ರೀ ಪುರಂದರದಾಸಾರ್ಯ ವಿರಚಿತ 


 ಶ್ರೀಕೃಷ್ಣ ಬಾಲಲೀಲಾ ಸುಳಾದಿ - ೬ 


 ರಾಗ : ಕಾಂಬೋಧಿ 


 ಧೃವತಾಳ 


ಕೆಲವರು ಕೆಂದಾವರಿಯ ಹಾಸಿ ಪವಡಿಸೆನೆ ಪವಡಿಸುವಿ

ಕೆಲವರು ಉಪಬರ್ಹಾಣ ಈಯಲು ನೀನಂಬುವೀ

ಕೆಲವರು ಕೇತಕಿಚಾಮರ ಬೀಸಲು ನೀನಲವೀ

ಕೆಲವರು ಪಾದಮಗಳ ವತ್ತಲು ನೀವೊಲಿವೀ

ಕೆಲವರು ತೋಳ್ದೊಡೆ ಮೈ ಮಗವೆರಸಿ

ಅಪ್ಪಾಲು ಮರಳಪ್ಪುವೆ

ಕೆಲವರು ಕೊಂಬು ಕೊಳಲು ತಿತ್ತಿರಿ

ಮೌರಿಗಳ ಬಾರಿಸೆ ನೀವಲಿವೀ

ಕೆಲರು ಮಂದರ ಮಧ್ಯಮ ತಾರಕ ಅನೇಕ ರಾಗಗಳು

ಪಾಡೆ ಝಣ ಝಣ ಝಣರೆಂದುಗ್ಗುಡಿಸೆ

ಕೆಲವರು ಧಿಂ ಧಿಂ ಧಿಂ ಧಿಂಮಿಕೆನುತಲಿ

ಕೆಲರು ನೃತ್ಯವಾಡೆ ಸುಖಿಸುವೆ

ಜಲಜಾಕ್ಷ ಏನಿನ್ನಿವರಾಪುಣ್ಯವನೆಂತು ಬಣ್ಣಿಪೇ

ಹಲಧರನು ನಿನ್ನೊಡನೆ ನಿನ್ನೊಳಾಡುವ

ಗೋಪ ಗೋಪಿ ಗೋಕುಲಕ್ಕೆ ನಮೊ ಪುರಂದರ 

 ವಿಠ್ಠಲ ಹಲಧರನು ನಿನ್ನೊಡನೆ ನಿನ್ನೊಳಾಡುವ ॥೧॥


 ಮಟ್ಟತಾಳ 


ನಖದ ಬೆಳಕು ಚಂದ್ರ ಸೂರ್ಯರ

ಸೋಲಿಸಿ ಮೆರೆವುತಿದೆ ನೋಡು ಮಖಾಧಿಪತಿಯೆ

ನಿನ್ನ ಸರ್ವಾಂಗ ಕಾಂತಿ ಲಾವಣ್ಯಗಳನೆ ಕಂಡು

ಸುಖಿಸಿದರಂತವರು ನಿನ್ನೊಡನೆ ನಿಖಿಳ

ಜಗತ್ಕಾರಣ ನೀನೆ ಬಲ್ಲಿ

ಮಕರ ಕುಂಡಲಾಭರಣವೆಸಿಯೇ

ವಿಖನಸಾರ್ಚಿತ ಶ್ರೀ ಪುರಂದರವಿಠ್ಠಲರೇಯಾ 

ನಿನ್ನ ಸರ್ವಾಂಗಕಾರತಿ ಲಾವಣ್ಯಗಳನು ಕಂಡು ॥೨॥


 ತ್ರಿವಿಡಿತಾಳ 


ರತ್ನ ಮಕುಟವು ರತ್ನ ಮಕುಟದಂತೆ

ರತ್ನ ಮುಕುಟಕ್ಕೆ ತುಂಬೆಯೆರಗಲು

ಕತ್ತಾರೆವೀರೆಯ ದಂಡೆಮೆರಿಯೇ

ಪೀತಾಂಬರ ಕಾಂಚೀದಾಮದಿ ಶೋಭಿತ

ಚಿತ್ತದೊಲ್ಲಭ ಪುರಂದರವಿಠ್ಠಲ ನೊಳು

ಉತ್ತರೋತ್ತರ ಶೃಂಗಾರವವ್ವಾ ॥೩॥


 ಅಟ್ಟತಾಳ 


ಅನಂತ ವೇದ ಸಮೂಹಗಳಿಂದಲಿ

ಅಜಾದಿ ಸುರರು ಅರಸಲಾತಕ್ಕಿನ್ನು

ನಂದ ಯಶೋದೆಯ ಮನೆಯಲ್ಲಿ

ವೃಂದಾವನದಿ ಕಾಣಿಸಿಕೊಂಡನವ್ವಾ

ನಂದ ನಂದನ ಕಂದ ಪುರಂದರವಿಠ್ಠಲ 

ಪರದೇವತಿ ಈತನಲ್ಲವೇನವ್ವಾ

ನಂದ ಯಶೋದೆಯ ಮನೆಯಲ್ಲಿ ॥೪॥


 ಆದಿತಾಳ 


ಬೆಣ್ಣೆಯ ಬಚ್ಚಳ ಕಂಡು ವರಳ ಮೇಲೇರಿಕೊಂಡು

ಚಿನ್ನರಿಗೆ ತುತ್ತುನೀವ ಠಕ್ಕುತನವೇನೆಂದು

ಕಣ್ಣ ಝಂಕರಿಸುತ್ತ ಕಂಜಾಕ್ಷನೆಂದು ಗೋಪಿ

ಟೊಣ್ಣಿಯ ಕೊಂಡಟ್ಟೀದಳಪ್ರತಿಮ ಪ್ರಭಾವನ್ನ

ಕಣ್ಣ ಝಂಕರಿಸುತ್ತ ಕಂಜಾಕ್ಷನೆಂದು ಗೋಪಿ

ಹೆಣ್ಣೇನು ನೋತಳೊ ಪುರಂದರವಿಠ್ಠಲನ್ನ 

ಕಣ್ಣಿಯಲಿ ಕಟ್ಟಿ ಅಳಿದಳೋ ವಿಶ್ವಕಾಯನ್ನ ॥೫॥


 ಜತೆ 


ನಂದದಾಮವ ಬಿಟ್ಟು ಕಂದನ್ನ ಬಿಗಿದಪ್ಪಿ

ಅಂದು ವಂದಿಸಿದಾ ಪುರಂದರವಿಠ್ಠಲನ್ನ ॥೬॥

***