Showing posts with label ಪ್ರಾಣೇಶಗೆ ಮಂಗಳಂ ಮಂಗಳ ವಾಯುಕುಮಾರನಿಗೆ sirivatsankita. Show all posts
Showing posts with label ಪ್ರಾಣೇಶಗೆ ಮಂಗಳಂ ಮಂಗಳ ವಾಯುಕುಮಾರನಿಗೆ sirivatsankita. Show all posts

Thursday 5 August 2021

ಪ್ರಾಣೇಶಗೆ ಮಂಗಳಂ ಮಂಗಳ ವಾಯುಕುಮಾರನಿಗೆ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಪ್ರಾಣೇಶಗೆ ಮಂಗಳಂ ಮಂಗಳ ವಾಯುಕುಮಾರನಿಗೆ

ಜಯಮಂಗಳ ಅಂಗನೆ ಸುತಗೆ ಮಂಗಳ ಭುಜಗಭೂಷಣ

ದೇವಗುರುವಿಗೆ ಮಂಗಳ ಭಾರತಿ ರಮಣನಿಗೆ ಪ


ತ್ರೇತಾಯುಗzಲ್ಲಿ ಖ್ಯಾತರಾದ ಸುರರ

ಘಾತಿಸಿ ಬಡಿದಂಥಾ ವಾತಾತ್ಮಜ

ಪ್ರೀತಿಲಿ ರಾಮನ ಖ್ಯಾತ ದೂತನಾಗಿ

ಭೂತಳದೊಳತಿ ಖ್ಯಾತಿಯ ಪಡೆದಂಥ 1


ದ್ವಾಪರದಲಿ ತಾ ಭೂಪ ಭೀಮನಾಗಿ

ಗೋಪಾಲಕನ ನಿಜ ದಾಸನಾಗಿ

ಪಾಪಿ ಖೂಳರ ಸಂತಾಪವ ಬಡಿಸುತ

ಗೋಪಾಲಸಖನ ಪ್ರತಾಪವ ಪೊಗಳಿದಂಥ 2


ದುರುಳ ಮತಗಳೆಲ್ಲ ಮುರಿಯಲೋಸುಗ

ಅವಸರದಿಂದಲಿ ಬಂದು ಕಲಿಯುಗದೀ

ಶಿರಿವತ್ಸಾಂಕಿತನಿಗೆ ಪರಮಪ್ರಿಯವಾದ

ವರಮಧ್ವಮತವನ್ನು ಧರೆಯೊಳು ತಂದಂಥ 3

***