..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ಪ್ರಾಣೇಶಗೆ ಮಂಗಳಂ ಮಂಗಳ ವಾಯುಕುಮಾರನಿಗೆ
ಜಯಮಂಗಳ ಅಂಗನೆ ಸುತಗೆ ಮಂಗಳ ಭುಜಗಭೂಷಣ
ದೇವಗುರುವಿಗೆ ಮಂಗಳ ಭಾರತಿ ರಮಣನಿಗೆ ಪ
ತ್ರೇತಾಯುಗzಲ್ಲಿ ಖ್ಯಾತರಾದ ಸುರರ
ಘಾತಿಸಿ ಬಡಿದಂಥಾ ವಾತಾತ್ಮಜ
ಪ್ರೀತಿಲಿ ರಾಮನ ಖ್ಯಾತ ದೂತನಾಗಿ
ಭೂತಳದೊಳತಿ ಖ್ಯಾತಿಯ ಪಡೆದಂಥ 1
ದ್ವಾಪರದಲಿ ತಾ ಭೂಪ ಭೀಮನಾಗಿ
ಗೋಪಾಲಕನ ನಿಜ ದಾಸನಾಗಿ
ಪಾಪಿ ಖೂಳರ ಸಂತಾಪವ ಬಡಿಸುತ
ಗೋಪಾಲಸಖನ ಪ್ರತಾಪವ ಪೊಗಳಿದಂಥ 2
ದುರುಳ ಮತಗಳೆಲ್ಲ ಮುರಿಯಲೋಸುಗ
ಅವಸರದಿಂದಲಿ ಬಂದು ಕಲಿಯುಗದೀ
ಶಿರಿವತ್ಸಾಂಕಿತನಿಗೆ ಪರಮಪ್ರಿಯವಾದ
ವರಮಧ್ವಮತವನ್ನು ಧರೆಯೊಳು ತಂದಂಥ 3
***
No comments:
Post a Comment