..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ರುದ್ರದೇವರು
ಬಾರೋ ಬ್ಯಾಗನೆ ಗಿರಿಜಾರಮಣನೆ ಪ
ನಾರದನುತ ಪಾದಾರವಿಂದ ತೋರಲು ಅ.ಪ
ಭಕುತರ ವೃಂದಕೆ ಭಕುತಿ ಮುಕುತಿಯಿತ್ತು
ಯುಕುತಿಲೆÉ ಪೊರೆಯುವ ಶಕುತಿಯ ತೋರಲು 1
ಭೂಮಿಯೊಳಿಹ ಸರ್ವ ಪಾಮರ ಜನರಿಗೆ
ಕಾಮಿತಫಲವೆಲ್ಲ ಪ್ರೇಮದಿ ಈಯಲು 2
ಮಡದಿಯ ನುಡಿಗೆ ನಿನ್ನಡಿಗೆ ಬಂದಂಥ
ಬಡವನ ಪೋದಂತೆ ತಡವ ಮಾಡದೆ ಈಗ 3
ಶಿರಿವತ್ಸಾಂಕಿತನೆಂದು ವರಶ್ರುತಿಗಳು ನಿನ್ನ
ಕರೆದು ತ್ರಿಜಗದ ನರಪನೆ ಈಗಲೆ 4
***
No comments:
Post a Comment