ಕಾಖಂಡಕಿ ಶ್ರೀ ಕೃಷ್ಣದಾಸರು
ನೆನಿ ಮನವೇ ನೀ ಮುಕುಂದನ ಪ
ನೆನಿ ಮನವೇ ನೀ ಮುಕುಂದನಾ| ಅಜ ವಂದ್ಯನಾ 1
ಸಿರಿಲಕ್ಷುಮಿ ಮನೋಹರನಾ| ಸುರಾಧಾರನಾ ಯದುವೀರನಾ2
ದುರಿತ ನಿವಾರಿಯಾ| ವರ ಶೌರಿಯಾ ಮುರವೈರಿಯಾ 3
ಮನೋಹರ ಮೂರುತಿ ರಾಮನಾ| ಘನ ಶ್ಯಾಮನಾನಂತ ನಾಮನಾ 4
ಗುರು ಮಹಿಪತಿ ಸುತ ಪ್ರೀಯನಾ| ಸ್ಮರ ನೈಯನಾ ಕೃಷ್ಣರೇಯನಾ 5
***