Showing posts with label ಈಡುಗಾಣೇನಯ್ಯಾ ಜಗದೊಳಗೆ ಬೇಡಿದಿಷ್ಟವ achalananda vittala ಮಧ್ವಸ್ತುತಿ madhwa stutih. Show all posts
Showing posts with label ಈಡುಗಾಣೇನಯ್ಯಾ ಜಗದೊಳಗೆ ಬೇಡಿದಿಷ್ಟವ achalananda vittala ಮಧ್ವಸ್ತುತಿ madhwa stutih. Show all posts

Saturday 1 May 2021

ಈಡುಗಾಣೇನಯ್ಯಾ ಜಗದೊಳಗೆ ಬೇಡಿದಿಷ್ಟವ ankita achalananda vittala ಮಧ್ವಸ್ತುತಿ madhwa stutih

 ಶ್ರೀ ಅಚಲಾನಂದದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ಮಧ್ವಸ್ತುತಿ....

ರಾಗ : ಸಾವೇರಿ       ತಾಳ : ತ್ರಿವಿಡಿ 


ಈಡುಗಾಣೇನಯ್ಯಾ 

ಜಗದೊಳಗೆ ಬೇಡಿದಿಷ್ಟವ ।

ಕೊಡುವ ಹನುಮ 

ಭೀಮ ಮಧ್ವರಾಯ ।। ಪಲ್ಲವಿ ।।


ಅಷ್ಟ ದಿಕ್ಕಿನ ಭೂಪನಾಳಿದ 

ದುಷ್ಟ ರಾವಣನ್ನ ಉರವನು ।

ದಿಟ್ಟಿಸಿ ನೋಡಿ ಸಮರದಲ್ಲಿ 

ಮುಷ್ಠಿ ಪ್ರಹರವನ್ನೇ ಕೊಡಲು ।

ಕಷ್ಟದಿಂ ಮೂರ್ಛಂಗತನಾಗಿ ಎದೆ 

ಹಿಟ್ಟಾಗಿ ಸ್ವರ್ಣ ತಟಾಕದಂತೆಸಿಯೆ । ಕಂ ।

ಗೆಟ್ಟು ಹತ್ತು ದಿಕ್ಕಿಗೆ ಓಡಿಸಿದೆ 

ದಿಟ್ಟನಾಗಿ ನಿಂದೊ ರಣದಿ ಹನುಮಾ ।। ಚರಣ ।।


ನಾರದನು ಅಯೋಧ್ಯದಿ ಪೇಳಲು 

ಶ್ರೀ ರಾಮ ಸೈನ್ಯ ಸಹಿತ ।

ವಾರಿಧಿಗಳನು ದಾಟಿ ವೇಗದಿ 

ನೂರು ತತಿ ಅಸುರನ್ನ ಪಟ್ಟಣ ।

ದ್ವಾರ ಬಂಧಿಸಿ ಶಾಖ 

ದ್ವಿಪದಲ್ಲಿದ್ದ ಅಸುರನ ಕಾಲಿಲೊದೆಯಲು ।

ವೀರ ವಿಭೀಷಣ ಸುಗ್ರೀವರ 

ಪುಚ್ಛದಿ ತಾರಿಸಿದೆಯೋ ಸಮರ್ಥನಿನಗ ।। ಚರಣ ।।


ರುದ್ರ ಬ್ರಹ್ಮರ ವರಬಲದಲ್ಲ್ಯ-

ವದ್ಧ್ಯನಾದ ಜರಾಸಂಧನ ।

ಅಧ್ವರ್ಯ ಲೀಲೆ ಪಶುವಿನಂದದಿ 

ಮರ್ದಿಸಿ ದುಷ್ಟ ಖಳನ ಸೀಳ್ದೆ ।

ಬದ್ಧರಾದ ನೃಪರ ಬಿಡಿಸಿದೆ 

ಅಧ್ವರ್ಯನಾಗಿ ಯಜ್ಞದಿ ನಿಂದೆ ।

ಯುದ್ಧದಲ್ಲಿ ದುರ್ಯೋಧನನ 

ವದ್ದೆ ಪ್ರಸಿದ್ಧ ಭೀಮರಾಯ ನಿನಗ ।। ಚರಣ ।।


ವಾದಿ ಗಜಕೇ ಮೃಗೇಂದ್ರ 

ವಾದಿ ವಾರಿಧಿ ವಡಬಾನಳ ಮಾಯಾ ।

ವಾದಿ ಪರ್ವತಕೆ ಕುಲಿಶ  

ಬೇಧ ಮತಾಂಬುಧಿಗೆ ಚಂದ್ರ ।

ಮೋದದಿಂ ಕೃಷ್ಣ ಸೀತಾರಾಮ 

ವೇದವ್ಯಾಸ ಅಷ್ಟವಾಳುಕ ಮುಷ್ಠಿ ತಂದೆ ।

ಸಾಧು ಜನರಿಗೆ ತತ್ತ್ವ ಬೋಧಿಸಿದೆ 

ಮೇದಿನಿಯೊಳು ಮಧ್ವರಾಯ ನಿನಗ ।। ಚರಣ ।।


ಇಂದುಮುಖಿ ಸೀತೆಗೆ ಮುದ್ರಿಕಿನಿತ್ತು 

ಬಂಧಿಸಿ ರಾಮನ್ನ ಕಥೆಯ ಪೇಳ್ದೆ ।

ಅಂದು ರೋಮಕೋಟಿ ಶಿವರ ಮಾಡೆ 

ತಂದೆ ಪುರುಷ ಮೃಗವನ್ನ ।

ಛಂದದಿಂ ಮಣಿಮಂತ ದೈತ್ಯನ್ನ 

ಕೊಂದು ಅಂದದಿಂ ಸೌಗಂಧಿಕವನು ।

ತಂದಿನಂದತೀರಥನಾದೆ ಅಚಲಾ-

ನಂದವಿಠಲನ ದಾಸ ನನಗ ।। ಚರಣ ।।

****


ಈಡುಗಾಣೆನಯ್ಯ ಜಗದೊಳಗೆ ಪ.


ಬೇಡಿದಭೀಷ್ಟಗಳ ಕೊಡುವ ಹನುಮ

ಭೀಮ ಮಧ್ವರಾಯ ಅ.ಪ.


ಅಷ್ಟದಿಕ್ಕಲಿ ಭೂಪರಾಳಿದ ದುಷ್ಟರಾವಣನ್ನ ಪುರವ

ದೃಷ್ಟಿಸಿ ನೋಡಿ ಸಮರದಲಿ ಪ್ರಹಾರವನೆ ಕೊಡಲು

ಕಷ್ಟದಿ ಮೂಛ್ರ್ಯಕೃತನಾಗಿಯೆದೆ ಹಿಟ್ಟಾಗಿಸನಂತಕಂದಿಸಿಯೆ

ಕಂಗೆಟ್ಟು ಹತ್ತು ದಿಸೆಗೆ ಓಡಿಸಿದ್ಯೊ

ದಿಟ್ಟನಾಗಿ ನಿರಂತರದಿ ಹನುಮಾ 1


ನಾರದ ಅಯೋಧ್ಯದಿ ಪೇಳಲು ಶ್ರೀ ರಾವಣ ಸೈನ್ಯಗಳ ಓಡಿಸಿ

ವಾರಿಧಿಗಳ ದಾಟಿ ಬೇಗ ನೂರುತಲೆ ಅಸುರನ ಪಟ್ಟಣದ

ದ್ವಾರ ಬಂಧಿಸಿ ಸಕಲದ್ವೀಪದಲ್ಲಿದ್ದ ಕ್ರೂರ ಅಸುರನ್ನ ಕಾಲಲೊದ್ದು

ವರ ವಿಭೀಷಣ ಸುಗ್ರೀವರ ಪುಚ್ಛದಲಿ

ತರುಬಿದಿಯೊ ಸಮರ್ಥ ಹನುಮಾ 2


ರುದ್ರ ಬ್ರಹ್ಮರ ವರದಲವಧ್ಯನಾದ ಜರಾಸಂಧನಾ

ಅಧ್ವರ್ಯದಲಿ ಪಶುವಂದದೀ ಮರ್ದಿಸಿ ದುಷ್ಟ

ಖಳರ ಸೀಳಿದ್ಯೊ

ಖೇದರಾದ ನೃಪರ ಬಿಡಿಸಿದೆ ಅಧ್ವರ್ಯನಾಗಿಯಾಗದಿ

ನಿಂದೆ ಯುದ್ಧದಲಿ

ದುರ್ಯೋಧನನ ಕೊಂದ ಪ್ರಸಿದ್ಧ ಭೀಮರಾಯ ನಿಮಗೆ3


ವಾದಿಗಜಕೆ ಮೃಗೇಂದ್ರ ವಾದಿವಾರುಧಿ ಬಡಿವ ಮಾಯಾ

ವಾದಿ ಪರ್ವತಕೆ ವಜ್ರ ಭೇದ ಮತಾಂಬುಧಿಗೆ ಚಂದ್ರ

ಮೋದತೀರ್ಥಾನಂದಗೆ ಕೃಷ್ಣಾ ಅಷ್ಟವಾಳುಕ ಮುಷ್ಟಿ ತಂದೆ

ಸಾಧುಜನರಿಗೆ ತತ್ವಬೋಧಿಸಿದೆ

ಮೇದಿನಿಯೊಳು ಮಧ್ವರಾಯ ನಿಮಗೆ 4


ಇಂದುಮುಖಿ ಸೀತೆಗೆ ಮುದ್ರಿಕೆಯನಿತ್ತು

ವಂದಿಸಿ ರಾಮಕಥೆಯ ಪೇಳಿದೆ

ಅಂದು ರೋಮಕೋಟಿ ಶಿವರಮಾಡಿ ಪುರುಷಮೃಗವನೆ

ತಂದೆ ಚಂದದಿಂ ಮಣಿಮಂತನ ಕೊಂದು ಸೌಗಂಧಿಕವ

ತಂದೆ ನಂದತೀರ್ಥರಾದ ಅಚಲಾನಂದ ವಿಠಲನ ದಾಸ ನಿಮಗೆ5

***